ಡಾ. ಎಸ್.ಪದ್ಮನಾಭ ಭಟ್ – ಪ್ರಬಂಧ ಮಂಡನೆ

ಕಿನ್ನಿಗೋಳಿ : ಉಪನ್ಯಾಸಕ ಡಾ. ಎಸ್.ಪದ್ಮನಾಭ ಭಟ್ ಎಕ್ಕಾರು ಇದೇ ಬರುವ ಜುಲೈ ತಿಂಗಳ 21ರಿಂದ 25ರವರೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ 25ನೇ ವಿಶ್ವ ರಾಜ್ಯಶಾಸ್ತ್ರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆ ಸಮ್ಮೇಳನದಲ್ಲಿ ನಡೆಯುವ ಸ್ಥಳೀಯ ಸರಕಾರಗಳ ಗೋಷ್ಠಿಯಲ್ಲಿ ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದವರ ಭಾಗವಹಿಸುವಿಕೆ ಕರ್ನಾಟಕ ಮತ್ತು ಕೇರಳ ಒಂದು ತಾಲನಿಕ ಅಧ್ಯಯನ ಎನ್ನುವ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ. ಈ ಹಿಂದೆ ಕೆನಡಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅವರಿಗೆ ಕಿರು ಮತ್ತು ಬೃಹತ್ ಸಂಶೋಧನಾ ಅನುದಾನ ನೀಡಿ ಗೌರವಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.

Kinnigoli-19071802

Comments

comments

Comments are closed.