ಆಟಿದ ಪಡ್ಸಲೆದ ಪೊರ್ಲು

ಕಿನ್ನಿಗೋಳಿ : ಆಟಿ ಆಚರಣೆಯಲ್ಲಿ ವೈಜ್ಞಾನಿಕತೆ ಇದೆ. ಇದು ಮೂಡ ನಂಬಿಕೆಯಲ್ಲ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದು ವೈದ್ಯರ ಮದ್ದಿನ ಅಗತ್ಯವಿಲ್ಲ ಎಂದು ಬಳ್ಕುಂಜೆ -ಕೊಲ್ಲೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ. ಶೋಭಾರಾಣಿ ಹೇಳಿದರು.
ಭಾನುವಾರ ಕಿನ್ನಿಗೊಳಿ ಯುಗಪುರುಷ ಸಭಾಭವನದಲ್ಲಿ ಭ್ರಾಮರೀ ಮಹಿಳಾ ಸಮಾಜ (ರಿ) ಮೆನ್ನಬೆಟ್ಟು ಇದರ 11 ನೇ ವಾರ್ಷಿಕೋತ್ಸವ ಹಾಗೂ ಆಟಿದ ಆಚರಣೆ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿ ಮಾತನಾಡಿ ಹಿಂದಿನ ಕಾಲದ ಜನರು ಮಧುಮೇಹ ಇನ್ನಿತರ ಸಮಸ್ಯೆ ಇರಲಿಲ್ಲ ಇಂದು ಆಧುನಿಕತೆ ಹೆಚ್ಚಿ ನಾವು ಸೋಮಾರಿಗಳಾಗುತ್ತಿವೆ ಇದರಿಂದ ಪರಿಸರ ಹಾಗೂ ನಾವು ಸೇವಿಸುವ ಆಹಾರ ಕ್ರಮದಿಂದಲೂ ಸಮಸ್ಯೆ ಉಂಟಾಗಿದೆ ಈ ಬಗ್ಗೆ ಜಾಗೃತರಾಗಬೇಕು ಎಂದರು.
ಈ ಸಂದರ್ಭ ಸಮಾಜ ಸೇವಕಿ ಬೇಬಿ, ಸಾಧಕ ಸೃಜನ ಮೂಲ್ಯ , ಸಾಧಕಿ ಸ್ವಾತಿ ಅವರನ್ನು ಸನ್ಮಾನಿಸಲಾಯಿತು.
ಲಿಟ್ಲ್‌ಫ್ಲವರ್ ಶಾಲೆ ಹಾಗೂ ಸೈಂಟ್ ಮೇರಿಸ್ ಶಾಲೆಯ ತಲಾ ೧೦ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಟ್ಟಲು ಧನ ಸಹಾಯ ನೀಡಲಾಯಿತು. ಶಕುಂತಳಾ ಅವರಿಗೆ ಅರ್ಥಿಕ ಸಹಾಯ ನೀಡಲಾಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ , ಮೆನ್ನಬೆಟ್ಟು ಪಿಡಿಒ ರಮ್ಯಾ ಕೆ. ಎಸ್, ಉದ್ಯಮಿ ದೀಪಕ್ ರೊಡ್ರಿಗಸ್, ಲಯನ್ಸ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಸ್ವಾಗತಿಸಿದರು. ಶ್ವೇತಾ ಆಚಾರ್ಯ, ವಿನಯ ಶ್ರೀಧರ್, ಸಂಧ್ಯಾ ಸನ್ಮಾನ ಪತ್ರ ವಾಚಿಸಿದರು. ಅನುಷಾ ಕರ್ಕೇರಾ ಕೊಡೆತ್ತೂರು ಕಾರ್ಯಕ್ರಮ ನಿರೂಪಿಸಿದರು. ಸುಜಯ ಗಣೇಶ್ ವಂದಿಸಿದರು.

Kinnigoli-25071808

Comments

comments

Comments are closed.

Read previous post:
Kinnigoli-25071807
ಮೀನಾ ಮಕ್ಕಳ ಸಿನಿಮಾ ಮುಹೂರ್ತ

ಕಿನ್ನಿಗೋಳಿ : ರಂಗಭೂಮಿ ಮತ್ತು ಸಿನಿಮಾರಂಗವು ಜನಜಾಗೃತಿ ಮೂಡಿಸುವ ಬಹುಮಾಧ್ಯಮ. ಉತ್ತಮ ಸಂದೇಶವುಳ್ಳ ಸಿನಿಮಾವನ್ನು ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ. ಕಿನ್ನಿಗೋಳಿ ಅಂತಹ ಗ್ರಾಮೀಣ ಪ್ರದೇಶದಿಂದಲೂ ಸಿನಿಮಾವೊಂದು ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ...

Close