ಬಳ್ಕುಂಜೆ ಗ್ರಾಮ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಯ 2018-19 ನೇಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ಸೋಮವಾರ ಪಂಚಾಯಿತಿ ಆವರಣದಲ್ಲಿ ನಡೆಯಿತು.
ವರ್ಷ ಕಳೆದರೂ ಪಡಿತರ ಚೀಟಿ ಸಿಕ್ಕಿಲ್ಲ
ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಷ ಕಳೆದರೂ ಬಿಪಿಎಲ್ ಪಡಿತರ ಚೀಟಿಗಳು ಗ್ರಾಮಸ್ಥರಿಗೆ ಇನ್ನೂ ಸಿಕ್ಕಿಲ್ಲ, ಎಲ್ಲದಕ್ಕೂ ಪಡಿತರ ಚೀಟಿಗಳನ್ನು ಕೇಳುವ ಈ ಕಾಲದಲ್ಲಿ ಹಲವು ಸೌಲಭ್ಯಗಳಿಗೆ ಪಡಿತರ ಚೀಟಿ ಖಡ್ಡಾಯವಿರುವಾಗ ಪಡಿತರ ಚೀಟಿಗಾಗಿ ಎಲ್ಲಿ ಅಲೆಯಬೇಕು ದಯಾಮಾಡಿ ಪಡಿತರ ಚೀಟಿ ಕೈ ಸೇರುವಂತೆ ಮಾಡಿ ಎಂದು ಕೆಲವು ಗ್ರಾಮಸ್ಥರು ವಿನಂತಿಗೆ ಆಹಾರ ಇಲಾಖೆಯ ಕಸ್ತೂರಿ ಉತ್ತರಿಸಿ ಪಡಿತರ ಚೀಟಿಯಲ್ಲಿ ತಾಂತ್ರಿಕ ಸಮಸ್ಯೆ ಇದ್ದು ಪಡಿತರ ಚೀಟಿ ಪರಿಶೀಲನೆ ಆಗಿದ್ದು ಮುಅಂದಿನ ದಿನಗಳಲ್ಲಿ ಅಂಚೆ ಮೂಲಕ ತಲುಪಿಸಲಾಗುತ್ತದೆ ಎಂದರು.
ಕೊಲ್ಲೂರು ಗ್ರಾಮದ ಸಶ್ಮಾನ ಕಾಮಗಾರಿ ಅರ್ಧ ಮಾತ್ರ ಆಗಿದೆ ಸರಕಾರದ ಅನುದಾನಗಳನ್ನು ಬಳಸಿಕೊಂಡು ಶೀಘ್ರ ಪೂರ್ಣಗೊಳಿಸಿ ಎಂದು ಗ್ರಾಮಸ್ಥರು ಹೇಳಿದರು.
೫೦ ಲಕ್ಷ ರೂಪಾಯಿಗಳ ಕಾಮಗಾರಿ ಎಂದು ಕೆಲವು ತಿಂಗಳುಗಳ ಹಿಂದೆ ಬ್ಯಾನರ್ ಹಾಕಲಾಗಿದೆ ಕಾಮಗಾರಿ ಸರಿಯಾಗಿ ಪ್ರಾರಂಭವಾಗಿಲ್ಲ ಯಾಕೆ ಎಂದು ಕೆಲವು ಗ್ರಾಮಸ್ಥರು ಪಂಚಾಯಿತಿಯನ್ನು ಪ್ರಶ್ನಿಸಿದರು. ಸಂಬಂದ ಪಟ್ಟ ಇಲಾಖೆಗಳಲ್ಲಿ ವಿಚಾರಿಸಿ ಶೀಘ್ರ ಕಾಮಗಾರಿ ನಡೆಯಲು ಪ್ರಯತ್ನಿಸಲಾಗುವುದು ಎಂದು ಪಂಚಾಯಿತಿ ಆಡಳಿತ ಉತ್ತರಿಸಿತು. ಬಳ್ಕುಂಜೆ ಮುಖ್ಯ ರಸ್ತೆ ಅಂಚಿನಲ್ಲಿ ಹೊಂಡ ಗುಂಡಿ, ದಾರಿದೀಪದ ವ್ಯವಸ್ಥೆ ಹಗೂ ಇನ್ನಿತರ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಿತು.
ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ನೋಡಲ್ ಅಧಿಕಾರಿಯಾಗಿ ಬಾಗವಹಿಸಿದ್ದರು.
ಕೃಷಿ ಅಧಿಕಾರಿ ಅಬ್ದುಲ್ ಬಷೀರ್, ಪಶು ಸಂಗೋಪನ ಇಲಾಖೆಯ ಡಾ. ಆರ್ ರಂಗನಾಥ್, ಮೆಸ್ಕಾಂ ಇಲಾಖೆಯ ಚಂದ್ರಹಾಸ್, ಮಹಿಲಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಾತ್ಯಾಯಿನಿ, ವೈದ್ಯಾಧಿಕಾರಿ ಶೋಭಾ ರಾಣಿ, ಪಂಚಾಯತ್‌ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಗ್ರಾಮಕರಣಿಕರಾದ ಕಿರಣ್‌ಕುಮಾರ್, ಕೆ. ಸಂತೋಷ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಬಳ್ಕುಂಜೆ ಗ್ರಾ. ಪಂ. ಉಪಾಧ್ಯಕ್ಷೆ ಸುಮಿತ್ರ ಎಸ್ ಕೋಟ್ಯಾನ್, ಪಿಡಿಒ ಜಲಜ ಟಿ, ಪಂಚಾಯಿತಿ ಸದಸ್ಯರಾದ ಮಮತಾ ಪೂಂಜಾ, ಪ್ರಭಾಕರ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಆನಂದ, ಭುವನೇಶ್ವರಿ, ಗೀತಾ ಕೆ. ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Kinnigoli-25071810

Comments

comments

Comments are closed.

Read previous post:
Kinnigoli-25071809
ಕಟೀಲು : ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಆಧುನಿಕತೆಯ ಕಾಲದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾಳಜಿ ಅತ್ಯಗತ್ಯವಾಗಬೇಕಾಗಿದೆ ನಾವು ಸೇವಿಸುವ ಆಹಾರ ಹಾಗೂ ಜೀವನ ಕ್ರಮದಲ್ಲಿ ಕಾಳಜಿ ವಹಿಸಿ ಕೊಂಡರೆ ನಾವು...

Close