ಕಟೀಲು : ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಆಧುನಿಕತೆಯ ಕಾಲದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾಳಜಿ ಅತ್ಯಗತ್ಯವಾಗಬೇಕಾಗಿದೆ ನಾವು ಸೇವಿಸುವ ಆಹಾರ ಹಾಗೂ ಜೀವನ ಕ್ರಮದಲ್ಲಿ ಕಾಳಜಿ ವಹಿಸಿ ಕೊಂಡರೆ ನಾವು ಸ್ವಸ್ಥ ಜೀವನ ನಡೆಸಲು ಸಾಧ್ಯ ಎಂದು ಮಂಗಳೂರು ಕೆ. ಎಂ. ಸಿಯ ವೈದ್ಯಕೀಯ ಅಧೀಕ್ಷಕ ಡಾ. ಆನಂದ ವೇಣುಗೋಪಾಲ್ ಹೇಳಿದರು.
ಭಾನುವಾರ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ದುರ್ಗಾ ಸಂಜೀವಿನಿ, ಮಣಿಪಾಲ್ ಆಸ್ಪತ್ರೆ ಕಟೀಲು ಮತ್ತು ಕೆ. ಎಂ. ಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯ, ಪೊಂಪೈ ಕಾಲೇಜು ಎನ್. ಎಸ್. ಎಸ್ ಘಟಕ , ಕಟೀಲು ಸ್ಪೋಟ್ಸ್ ಎಂಡ್ ಗೇಮ್ಸ್ ಕ್ಲಬ್ ಕಟೀಲು, ಶ್ರೀ ದುರ್ಗಾಂಬಿಕಾ ಯುವಕ, ಯುವತಿ ಮಂಡಲ ( ರಿ ) ಗಿಡಿಗೆರೆ ಇದರ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ , ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು , ಕೆ. ಸಿ. ಎಂ.ಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ರಾಕೇಶ್, ಹರ್ಬರ್ಟ್ ಮರಿಯಾ ಪಿರೇರಾ, ಪೊಂಪೈ ಕಾಲೇಜು ಎನ್. ಎಸ್. ಎಸ್ ಅಧಿಕಾರಿ ಡಾ. ವಿಕ್ಟರ್ ವಾಜ್, ಗಿಡಿಗರೆ ಶ್ರೀದುರ್ಗಾಂಬಿಕ ಯುವಕ ಯುವತಿ ಮಂಡಲದ ನೇಮಿರಾಜ್ , ಕಟೀಲು ಸ್ಪೋಟ್ಸ್ ಗೇಮ್ಸ್ ಕ್ಲಬ್‌ನ ಕೇಶವ ಕಟೀಲು, ತಾ. ಪಂ. ಮಾಜಿ ಸದಸ್ಯ ತಿಮ್ಮಪ್ಪ ಕೋಟ್ಯಾನ್, ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಧರ ಮತ್ತಿತರರು ಉಪಸ್ಥಿತರಿದ್ದರು. ಕೆ. ಎಂ.ಸಿಯ ತಜ್ಞ ವೈದ್ಯರಾದ ಡಾ. ಪದ್ಮನಾಭ ಕಾಮತ್, ಡಾ. ಆತ್ಮಾನಂದ ಹೆಗ್ಡೆ, ಡಾ. ಪ್ರಹ್ಲಾದ್ ಕುಷ್ಟಗಿ, ಡಾ. ಲಿನ್ಸೆಲ್ ಹಿಲ್ದಾ ಟಿಕ್ಲೇರಿಯಾ, ಡಾ. ದೀಪಕ್ ಮಡಿ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿದರು.

Kinnigoli-25071809

 

Comments

comments

Comments are closed.

Read previous post:
Kinnigoli-25071808
ಆಟಿದ ಪಡ್ಸಲೆದ ಪೊರ್ಲು

ಕಿನ್ನಿಗೋಳಿ : ಆಟಿ ಆಚರಣೆಯಲ್ಲಿ ವೈಜ್ಞಾನಿಕತೆ ಇದೆ. ಇದು ಮೂಡ ನಂಬಿಕೆಯಲ್ಲ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದು ವೈದ್ಯರ ಮದ್ದಿನ ಅಗತ್ಯವಿಲ್ಲ ಎಂದು ಬಳ್ಕುಂಜೆ -ಕೊಲ್ಲೂರು ಸರಕಾರಿ ಆಯುರ್ವೇದ...

Close