ಕಟೀಲು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

ಕಟೀಲು : ಕಟೀಲು ಗ್ರಾಮ ಪಂಚಾಯಿತಿಯ 2017-18ರ ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಪಂಚಾಯಿತಿ ಸಭಾಭವದಲ್ಲಿ ನಡೆಯಿತು.
ಕಳೆದ ಆರು ತಿಂಗಳಿನಲ್ಲಿ ಒಟ್ಟು 28 ಕಾಮಗಾರಿಗಳು ನಡೆದಿದ್ದು 21 ಕಾಮಗಾರಿ ಪೂರ್ಣಗೊಂಡಿವೆ. ಒಟ್ಟು1862 ಮಾನವ ದಿನಗಳ ಕೆಲಸ ಆಗಿವೆ 183 ಕುಟುಂಬಗಳು ಯೋಜನೆಯಲ್ಲಿ ನೊಂದಾಯಿಸಿಕೊಂಡಿದ್ದು 274 ಉದ್ಯೋಗ ಚೀಟಿಗಳು ಸಕ್ರಿಯವಾಗಿದೆ. 55 ಕುಟುಂಬಗಳು ಕೆಲಸ ಮಾಡಿವೆ ಎಂದು ತಾಲೂಕು ಸಂಯೋಜನಾಧಿಕಾರಿ ಧನಲಕ್ಷೀ ಹೇಳಿದರು.
ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ವರದಿಯನ್ನು ಸಭೆಯಲ್ಲಿ ಓದಿದರೆ ಸಾಲದು ಅದರ ಪ್ರತಿಯನ್ನು ಗ್ರಾಮಸ್ಥರಿಗೆ ನೀಡಬೇಕು ಕಳೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ತಿಳಿಸಲಾಗಿದ್ದರೂ ಕಾರ್ಯಗತಗೊಳ್ಳಲಿಲ್ಲ ಯಾಕೆ ಎಂದು ಗ್ರಾಮಸ್ಥ ಸಂಜೀವ ಮಡಿವಾಳ ಹೇಳಿದರು. ಅದಕ್ಕೆ ಉತ್ತರಿಸಿದ ತಾಲೂಕು ಸಂಯೋಜನಾಧಿಕಾರಿ ವರದಿಯನ್ನು ಸಂಪೂರ್ಣವಾಗಿ ಓದಲಾಗುತ್ತದೆ ಇದರ ಪ್ರತಿಗೆ ಆಡಳಿತ ವೆಚ್ಚ ಹೆಚ್ಚಾಗುವುದರಿಂದ ನೀಡಲಾಗಿಲ್ಲ ಅಗತ್ಯವಿದ್ದರೆ ಇದನ್ನು ಪಡೆದು ಓದಬಹುದು ಎಂದರು.
ಕೆಲವು ಕಾಮಗಾರಿಗಳ ಹಣ ಯಾಕೆ ಮಂಜೂರಾಗಿಲ್ಲ ಎಂದು ಚಂದ್ರಕುಮಾರ್ ಕೊಡೆತ್ತೂರು ಕೇಳಿದಾಗ ಕಾಮಗಾರಿ ನಡೆಸುವಾಗ ಸರಿಯಾದ ಪೊಟೋ ಅಳವಡಿಸಬೇಕು, ಮತ್ತು ಸಾಮಾಗ್ರಿಗಳ ಜಿ.ಎಸ್.ಟಿ ಬಿಲ್ ನೀಡಬೇಕು ಈ ಕಾರಣದಿಂದ ಹಣ ತಡೆ ಹಿಡಿಯಲಾಗಿದೆ ಎಂದು ಪಂಚಾಯತ್ ಪಿಡಿಓ ಪ್ರಕಾಶ್ ತಿಳಿಸಿ ಮುಂದಿನ ದಿನದಲ್ಲಿ ಸರಿಪಡಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕರ ಪರವಾಗಿ ವಿಜಯಕುಮಾರ್ ನೋಡೆಲ್ ಅಧಿಕಾರಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನರೇಗಾ ತಾಂತ್ರಿಕ ಇಂಜಿನೀಯರ್ ಅಜಿತ್, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಮತ್ತು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪಿಡಿಒ ಪ್ರಕಾಶ್ ಬಿ, ಸ್ವಾಗತಿಸಿ ವಂದಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು.

Kateel-25071803

 

Comments

comments

Comments are closed.