ಮೀನಾ ಮಕ್ಕಳ ಸಿನಿಮಾ ಮುಹೂರ್ತ

ಕಿನ್ನಿಗೋಳಿ : ರಂಗಭೂಮಿ ಮತ್ತು ಸಿನಿಮಾರಂಗವು ಜನಜಾಗೃತಿ ಮೂಡಿಸುವ ಬಹುಮಾಧ್ಯಮ. ಉತ್ತಮ ಸಂದೇಶವುಳ್ಳ ಸಿನಿಮಾವನ್ನು ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ. ಕಿನ್ನಿಗೋಳಿ ಅಂತಹ ಗ್ರಾಮೀಣ ಪ್ರದೇಶದಿಂದಲೂ ಸಿನಿಮಾವೊಂದು ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದ ಶ್ರೀ ರಾಘವೇಂದ್ರ ಸ್ವಾಮೀ ಸನ್ನಿಧಾನದಲ್ಲಿ ಮೂಲ್ಕಿಯ ನಮನ ಕ್ರಿಯೇಶನ್ಸ್ ಹಾಗೂ ಕಿನ್ನಿಗೊಳಿಯ ವಿಜಯಾ ಕಲಾವಿದರು ಜಂಟಿಯಾಗಿ ನಿರ್ಮಿಸುತ್ತಿರುವ ಮೀನಾ ಕನ್ನಡ ಮಕ್ಕಳ ಚಿತ್ರದ ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ಸೊಬಗನ್ನು ಜಗತ್ತಿಗೆ ತೆರೆದಿಡುವ ಮೂಲಕ ರಂಗಭೂಮಿ ಮತ್ತು ತುಳು ಸಿನಿಮಾರಂಗ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರತಿಭಾವಂತ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ವೇದಿಕೆ ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ಅವರು ಸಿನಿಮಾದ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸುತ್ತಾ ಮಕ್ಕಳಿಗೆ ವಾರ್ಷಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 700 ಕೋಟಿ ರೂ.ಗಳನ್ನು ವಿನಿಯೋಗಿಸುವ ಲಯನ್ಸ್ ಸಂಸ್ಥೆಯು ಲಿಯೋ ಕ್ಲಬ್ ಮೂಲಕ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮೀನಾ ಸಿನಿಮಾಕ್ಕೂ ಸಂಸ್ಥೆಯು ಸಹಕಾರ ನೀಡಿ ಪ್ರೋತ್ಸಾಹಿಸಲಿದೆ ಎಂದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಹಳೆಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ವಸಂತ ಬೆರ್ನಾಡ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ರಾಜ್ಯೋತ್ಸವ ಪುರಸ್ಕೃತ ಚಂದ್ರಶೇಖರ ಸುವರ್ಣ, ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್, ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರಟ್ಟು, ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಉದ್ಯಮಿ ಪ್ರತೀಕ್ ಶೆಟ್ಟಿ, ವಿಜಯಾ ಕಲಾವಿದರ ಗೌರವಾಧ್ಯಕ್ಷ ಕೆ.ಭುವನಾಭಿರಾಮ ಉಡುಪ, ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು, ನಿರ್ದೇಶಕ, ಸಂದೀಪ್ ಪಣಿಯೂರ್, ಛಾಯಾಗ್ರಹಕ ಅರುಣ್ ಕನ್ಯಾನ, ಸಹಾಯಕ ನೀಲ್ ರಾಕೇಶ್, ನೃತ್ಯ ಸಂಯೋಜಕಿ ಬಬಿತಾ ನರೇಶ್ ಕೊಡೆತ್ತೂರು, ಸ್ಥಿರ ಚಿತ್ರಗಾರ ಹರಿಪ್ರಸಾದ್ ನಂದಳಿಕೆ, ಪ್ರಸಾಧನಗಾರ ಗಿರೀಶ್ ಫಲಿಮಾರ್, ತಾಂತ್ರಿಕ ವರ್ಗದಲ್ಲಿನ ಗಗನ್ ಸುವರ್ಣ ಮೂಲ್ಕಿ, ವಿನಯಕುಮಾರ್ ಕೊಲ್ಲೂರುಪದವು, ಸುಧಾಕರ ಸಾಲ್ಯಾನ್ ಸಂಕಲಕರಿಯ, ದಿನೇಶ್ ಪಾಪು ಮುಂಡ್ಕೂರು, ಪ್ರದೀಪ್ ಬೆಳ್ಮಣ್, ವಿಲ್ಫ್ರೆಡ್ ಕೊಲ್ಲೂರು, ಶಶಿಕರ ಕೆರೆಕಾಡು, ಪಿಆರ್‌ಒ ದೀಪಿಕಾ ಪರೇಶ್ ಮಂಗಳೂರು, ಅಶೋಕ್‌ಕುಮಾರ್ ಕಾಸರಗೋಡು, ಮೈಥ್ರೇಯ ಕಾರ್ಕಳ,
ನಮನ ಕ್ರಿಯೇಶನ್ಸ್‌ನ ನರೇಂದ್ರ ಕೆರೆಕಾಡು ಸ್ವಾಗತಿಸಿ ನಿರೂಪಿಸಿದರು. ವಿಜಯಾ ಕಲಾವಿದರ ಶರತ್ ಶೆಟ್ಟಿ ಕಿನ್ನಿಗೋಳಿ ವಂದಿಸಿದರು.

Kinnigoli-25071807

Comments

comments

Comments are closed.

Read previous post:
Kinnigoli-19071805
ತುಳು ನಾಟಕ ತರಬೇತಿ ಚಾಲನೆ

ಕಿನ್ನಿಗೋಳಿ : ಕಲಾವಿದರು ಕಲಾಭಿಮಾನಿಗಳ ಅಭಿರುಚಿಗೆ ತಕ್ಕಂತೆ ನಾಟಕ ಪ್ರದರ್ಶಿಸದೆ ಕಲೆಯ ಮಟ್ಟವನ್ನು ಉಳಿಸುವಂತಃ ಪ್ರದರ್ಶನಗಳನ್ನು ನೀಡಿದಾಗ ರಂಗಭೂಮಿ ಉಳಿಯಲು ಸಾಧ್ಯ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು...

Close