ಕಾಲೇಜು ಶಿಕ್ಷಣ ಶಿಸ್ತು ಸಂಯಮ ಅಗತ್ಯ

ಕಿನ್ನಿಗೋಳಿ  : ಕಾಲೇಜು ಶಿಕ್ಷಣದಲ್ಲಿ ಶಿಸ್ತು ಸಂಯಮದ ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಗೌರವಿಸಿ, ಘನತೆಯನ್ನು ವಿದ್ಯಾರ್ಥಿಗಳು ಎತ್ತಿ ಹಿಡಿಯಬೇಕು ಎಂದು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ.ಬಿ.ಪ್ರಸನ್ನ ಹೇಳಿದರು.
ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ನಡೆಸಿದ ಫ್ರೆಷರ್ಸ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ್ ಕೆ, ಐಕ್ಯುಎಸಿ ಸಂಚಾಲಕ ಡಾ. ಸಂತೋಷ್ ಪಿಂಟೋ ಶಿರ್ತಾಡಿ, ಪ್ರಾಧ್ಯಾಪಕರಾದ ಮಾಲತಿ ಕೆ, ರೋಶ್ನಿ ಯಶವಂತ್, ಮಂಜುಳಾ ಮಲ್ಯ, ಹರಿಣಾಕ್ಷಿ, ಪ್ರವೀಣ್ ಕುಮಾರ್. ಅಬ್ದುಲ್ ರಜಾಕ್, ಅಕ್ಷತಾ ಸುವರ್ಣ, ಪ್ರಸನ್ನ ಕುಮಾರ್, ರಾಹುಲ್ ಕುಮಾರ್, ಶಿವಕುಮಾರ್, ಅಶ್ವಿನ್ ಮೆಂಡೋನ್ಸಾ, ವಿದ್ಯಾರ್ಥಿ ನಾಯಕಿಯರಾದ ವಿಶ್ಮಿತಾ, ಅನ್ವಿತಾ, ಸುಶ್ಮಿತಾ ಉಪಸ್ಥಿತರಿದ್ದರು.
ವಿಶ್ಮಿತ ವಂದಿಸಿದರು. ಶ್ರೀಪ್ರಿಯ ಕಾರ್ಯಕ್ರಮ ನಿರೂಪಿಸಿದರು.

Kinnigoli-25071804

 

Comments

comments

Comments are closed.

Read previous post:
Kinnigoli-25071803
ಸ್ವಚ್ಚತೆಗೆ ಜನ ಜಾಗೃತಿ ಅಗತ್ಯ

ಕಿನ್ನಿಗೋಳಿ : ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಗೆ ಜನ ಜಾಗೃತಿ ಅಗತ್ಯವಿದೆ. ಸ್ವಚ್ಚತಾ ಕಾರ್ಯಕ್ಕೆ ನಾಗರಿಕರು ಮುಕ್ತವಾಗಿ ತಮ್ಮನ್ನು ಸ್ವಯಂ ಪ್ರೇರಿತರಾಗಿ ತೊಡಗಿಕೊಳ್ಳಬೇಕು. ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು....

Close