ದಿ. ಕೊ. ಅ. ಉಡುಪ ಸಂಸ್ಮರಣಾ ಸಮಾರಂಭ

ಕಿನ್ನಿಗೋಳಿ : ಹಿರಿಯರ ಸತ್‌ಚಿಂತನೆಯ ಮಾರ್ಗದರ್ಶನದಿಂದ ನಮ್ಮ ಜೀವನ ಸಾಗಿಸಿದಾಗ ನಮ್ಮ ಬದುಕು ಪಾವನವಾಗುತ್ತದೆ. ಇದಕ್ಕೆ ಸಾಂಸ್ಕ್ರತಿಕ ಹಾಗೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ದಿ. ಕೊ. ಅ. ಉಡುಪ ಅವರ ಜೀವನ ಸಾಕ್ಷಿಯಾಗಿದೆ ಎಂದು ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಯುಗಪುರುಷ ಸಭಾಭಾವನದಲ್ಲಿ ಮಂಗಳವಾರ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತಣಾಡಿದರು.
ನಂದಳಿಕೆ ಮುದ್ದಣ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ನಂದಳಿಕೆ ಬಾಲಚಂದ್ರ ರಾವ್ ಸಂಸ್ಮರಣಾ ಮಾತುಗಳನ್ನಾಡಿದರು.
ದಿ. ಕೊ.ಅ. ಉಡುಪ ಪ್ರಶಸ್ತಿಯನ್ನು ಸಾಹಿತಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ನೀಡಲಾಯಿತು. ಕವತ್ತಾರು ಶ್ರೀ ಅಬ್ಬಗದಾರಗ ಮಹಾಲಿಂಗೇಶ್ವರ ದೇವಳದ ಅರ್ಚಕ ವೇದವಿದ್ವಾಂಸ ವೇದಮೂರ್ತಿ ಅನಂತ ಪದ್ಮನಾಭ ಭಟ್ ಅವರನ್ನು ದಿ. ಕಮಲಾಕ್ಷಿ ಉಡುಪರ ಸ್ಮರಣಾರ್ಥ ವೇದವಿದ್ವಾಂಸರ ನೆಲೆಯಲ್ಲಿ ಸನ್ಮಾನಿಸಲಾಯಿತು.
ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ಹಿಂದಿನ ಹಾಗೂ ಇಂದಿನ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಅಜ ಗಜಾಂತರ ವ್ಯತ್ಯಾಸವಿದೆ ಸಾಮಜಿಕ ಪ್ರಜ್ಞೆ, ಸ್ವಸ್ಥ ಸಮಾಜದ ನೈಜ ಚಿತ್ರಣ ನೀಡಬೇಕು ಎಂದರು.
ಸುಮಾರು ೫೨೫ಕ್ಕೂ ಮಿಕ್ಕಿ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಅರ್ಪಿಸಿರುವ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಸಾಂತೂರು ಶ್ರೀನಿವಾಸ ತಂತ್ರಿ ರಚಿತ ದೇಗುಲ ದರ್ಶನ ಹಾಗೂ ಅನಂತ ಚಿಂತಾಮಣಿ ಜ್ಯೋತಿಷಿ ರಚಿತ ಕಡಲು ಹಾಗೂ ಡಾ. ದೊಡ್ಡರಂಗೇಗೌಡ ರಚಿತ ಸೋಪಾನ ಸೋಪಾನ ಏರಿ ಶಿಖರ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಅತ್ಯುತ್ತಮ ಬರವಣಿಗೆ ಪ್ರಶಸ್ತಿಗಳನ್ನು ರಚನಾ ದ.ಕ.ಜಿ.ಪಂ.ಹಿ.ಪಾ.ಶಾಲೆ ನಡುಗೋಡು, ಸೃಷ್ಠಿ ಲಿಟ್ಲ್ ಪ್ಲವರ್ ಶಾಲೆ ಕಿನ್ನಿಗೋಳಿ, ಸಾಕ್ಷಿತ್ ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆ ಕಿನ್ನಿಗೋಳಿ, ತಿಲಕ್ ದ.ಕ.ಜಿ.ಪಂ.ಹಿ.ಪಾ.ಶಾಲೆ ಉಲ್ಲಂಜೆ ಇವರಿಗೆ ನೀಡಲಾಯಿತು.
ಶ್ರುತಿ ಪೊಂಪೈ ಪದವಿಪೂರ್ವ ಕಾಲೇಜು ಐಕಳ, ಶ್ರೀನಿ ಶ್ರೀ ಶಾರದಾ ಫ್ರೌಡ ಶಾಲೆ ಶಿಮಂತೂರು, ಕೃತಿಕಾ ಕಟೀಲು ಪದವಿಪೂರ್ವ ಕಾಲೇಜು, ಪ್ರಜ್ಞಾ ನಾಯಕ್ ಲಿಟ್ಲ್ ಪ್ಲವರ್ ಫ್ರೌಡ ಶಾಲೆ ಕಿನ್ನಿಗೋಳಿ, ಭರತ್ ಸರ್ವೋದಯ ಪ್ರೌಢ ಶಾಲೆ ಅವರಿಗೆ ಎಂ.ಜಿ. ರಾಮಣ್ಣ ಪಕ್ಷಿಕೆರೆ, ರಾಮಚಂದ್ರ ಭಟ್ ಹಾಗೂ ಆರೂರು ಲಕ್ಷ್ಮೀ ರಾವ್ ಅವರ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ದೇವರಾಯ ಮಲ್ಯ ಪ್ರತಿಷ್ಠಾನ ಪುರಸ್ಕಾರವನ್ನು ಪತಿಭಾವಂತ ವಿದ್ಯಾರ್ಥಿಗಳಾದ ರಚನಾ ಪ್ರಭು, ಶರಲ್ ಲೆನೆಟ್ ಪಿಂಟೊ, ಪ್ರತ್ವಿಕ್ ಕಾಮತ್, ಸಂದೇಶ್ ಶೆಣೈ, ಶಶಾಂಕ್ ಪೈ ಅವರಿಗೆ ನೀಡಲಾಯಿತು.
ಈ ಸಂದರ್ಭ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಸಾಹಿತಿ ಕೆ.ಜಿ. ಮಲ್ಯ, ಡಾ. ನಯನಾಭಿರಾಮ ಉದುಪ, ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ ಪುನರೂರು, ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ, ಪ್ರಕಾಶಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿ, ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
Kinnigoli-25071806

Comments

comments

Comments are closed.

Read previous post:
Kinnigoli-25071805
ಹಳೆಯಂಗಡಿ : ರಿಕ್ಷಾ ಯೂನಿಯನ್‌ಗೆ ಅಯ್ಕೆ

ಹಳೆಯಂಗಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಅಹಮದ್ ಬಾವ ಮದನಿ ಅಯ್ಕೆಯಾಗಿದ್ದಾರೆ. ಪದಾಧಿಕಾರಿಗಳು : ಶಶೀಂದ್ರ ಎಂ. ಸಾಲ್ಯಾನ್ (ಗೌರವಾಧ್ಯಕ್ಷರು), ಪ್ರವೀಣ್ ಸುವರ್ಣ...

Close