ನೆಲಮಂಗಲ :ಕಾರು ಅಪಘಾತ

ಕೆ.ಎಸ್.ಆರ್.ಟಿ.ಸಿ ಬಸ್, ಕ್ಯಾಂಟರ್ ನಡುವೆ ಕಾರು ಸಿಲುಕಿ ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಸಮೀಪದ ನೆಲಮಂಗಲ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಮೃತರನ್ನು ಕಟೀಲು ದುರ್ಗಾಪರಮೇಶ್ವರಿ ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರ ಪುತ್ರ ಶ್ರೀನಿಧಿ ಆಸ್ರಣ್ಣ(21) ಹಾಗೂ ಗುರುಪುರ ಕೈಕಂಬ ನಿವಾಸಿ ಪ್ರಜ್ವಲ್ (20) ಎಂದು ಗುರುತಿಸಲಾಗಿದೆ. ಶ್ರೀ ನಿಧಿ ಭಾನುವಾರ ಕಟೀಲಿನಿಂದ ಬೆಂಗಳೂರಿಗೆ ಹೊರಟು ತಮ್ಮ ಕೆಲಸ ಮುಗಿಸಿ ಮಂಗಳವಾರ ರಾತ್ರಿ ತನ್ನ ಗೆಳೆಯ ಪ್ರಜ್ವಲ್ ಸಹೋದರ ಪ್ರತೀಕ್ ನನ್ನು ಪ್ರಜ್ವಲ್ ನ ಕಾರಿನಲ್ಲಿ ತುಮಕೂರಿಗೆ ಬಿಟ್ಟು ವಾಪಸ್ಸಾಗುವಾಗ ದುರ್ಘಟನೆ ನಡೆದಿದೆ. ಈ ಸಂದರ್ಭ ಶ್ರೀನಿಧಿ ಆಸ್ರಣ್ಣ ಮತ್ತು ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ಶರತ್ ಉಡುಪ ಮತ್ತು ಶರತ್ ಭಂಡಾರಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಟೀಲು ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಅವರ ಎರಡು ಮಂದಿ ಮಕ್ಕಳಲ್ಲಿ ಹಿರಿಯವನಾದ ಶ್ರೀನಿಧಿ ಆಸ್ರಣ್ಣ, ಪ್ರಾರ್ಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನಲ್ಲಿ ಪೂರೈಸಿದ್ದು ಪ್ರಸ್ತುತ ನಿಟ್ಟೆಯಲ್ಲಿ ಇಂಜಿನೀಯರ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ, ಬಾಲ್ಯದಲ್ಲಿಯೇ ಅತ್ಯಂತ ಚುರುಕು ಸ್ವಭಾವದರಾಗಿದ್ದು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭಾವಂತನಾಗಿದ್ದರು ತನ್ನ ತಂದೆ ಹರಿನಾರಾಯಣ ದಾಸ ಆಸ್ರಣ್ಣ ನಡೆಸುತ್ತಿದ್ದ ಶ್ರೀ ದುರ್ಗಾಮಕ್ಕಳ ಮೇಳದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದ ಬಗ್ಗೆ ತರಬೇತಿ ಪಡೆದು ಅನೇಕ ಕಡೆಗಳಲ್ಲಿ ಪ್ರದರ್ಶನ ನೀಡಿದ್ದರು. ಕಬಡ್ಡಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಾಗವಹಿಸಿದ ಅನುಭವ ಹಾಗೂ ಬಜಪೆಯ ಜಾಗೋ ಪ್ರೆಂಡ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು.

Kateel-25071801 Kateel-25071802

Comments

comments

Comments are closed.

Read previous post:
Kateel-25071803
ಕಟೀಲು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

ಕಟೀಲು : ಕಟೀಲು ಗ್ರಾಮ ಪಂಚಾಯಿತಿಯ 2017-18ರ ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಪಂಚಾಯಿತಿ ಸಭಾಭವದಲ್ಲಿ ನಡೆಯಿತು. ಕಳೆದ ಆರು...

Close