ಸ್ವಚ್ಚತೆಗೆ ಜನ ಜಾಗೃತಿ ಅಗತ್ಯ

ಕಿನ್ನಿಗೋಳಿ : ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಗೆ ಜನ ಜಾಗೃತಿ ಅಗತ್ಯವಿದೆ. ಸ್ವಚ್ಚತಾ ಕಾರ್ಯಕ್ಕೆ ನಾಗರಿಕರು ಮುಕ್ತವಾಗಿ ತಮ್ಮನ್ನು ಸ್ವಯಂ ಪ್ರೇರಿತರಾಗಿ ತೊಡಗಿಕೊಳ್ಳಬೇಕು. ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ತೋಕೂರಿನಲ್ಲಿ ಮಂಗಳೂರಿನ ನೆಹರು ಯುವ ಕೇಂದ್ರದ ಸಹಕಾರದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಹಾಗೂ ತೋಕೂರು ಶ್ರೀಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ನಡೆದ ಸ್ವಚ್ಚ ಭಾರತ ಅಭಿಯಾನದ ಬೇಸಿಗೆ ಶಿಬಿರದ ಸರಣಿ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಜಾಗೃತಿಗಾಗಿ ಬೈಕ್ ಜಾಥಾಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಜಾಥಾ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಲೈಟ್ ಹೌಸ್ ಇಂದಿರಾನಗರ, ಹಳೆಯಂಗಡಿ ಪೇಟೆ, ಪಂಡಿತ್ ಹರಿ ಭಟ್ ರಸ್ತೆ, ಪಡುಪಣಂಬೂರು, ಕಲ್ಲಾಪು, ಬೆಳ್ಳಾಯರು, ಕೆರೆಕಾಡು, ಪುನರೂರು, ಎಸ್ ಕೋಡಿಯಾಗಿ, ತೋಕೂರಿನಲ್ಲಿ ಕೊನೆಗೊಂಡಿತು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯರಾದ ಜೀವನ್ ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷ ಮೋಹನ್‌ದಾಸ್ ತೋಕೂರು, ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಸಂತೋಷ್‌ಕುಮಾರ್, ದಿನೇಶ್‌ಕುಲಾಲ್, ಸಂಪಾವತಿ, ಪುಷ್ಪಾವತಿ, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಶ್ಯಾಮಲಾ ಭಟ್, ಸಿಬಂದಿಗಳು, ಕ್ಲಬ್‌ನ ಗೌರವಾಧ್ಯಕ್ಷ ಯೊಗೀಶ್ ಕೋಟ್ಯಾನ್, ಕಾರ್ಯದರ್ಶಿ ಸಂತೋಷ್ ದೇವಾಡಿಗ, ದೀಪಕ್ ಸುವರ್ಣ, ಸಂಪತ್ ದೇವಾಡಿಗ, ನಾರಾಯಣ ಜಿ.ಕೆ, ಜಗದೀಶ್ ಕುಲಾಲ್, ಗೌತಮ್ ಬೆಳ್ಚಡ, ಮುಖೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್ ಸ್ವಾಗತಿಸಿದರು. ಗಣೇಶ್ ಪೂಜಾರಿ ವಂದಿಸಿದರು, ಸುರೇಶ್ ಶೆಟ್ಟಿ ನಿರೂಪಿಸಿದರು.

Kinnigoli-25071803

 

Comments

comments

Comments are closed.

Read previous post:
Kinnigoli-25071802
ಮೂಳೂರು: ಕುಸ್ತಿ ಪಂದ್ಯಾಟ

ಕಿನ್ನಿಗೋಳಿ : ಕಾಪು ಮೂಳೂರಿನಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರದ ವಿದ್ಯಾರ್ಥಿಗಳು 3 ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ. ಶಿಕ್ಷಕರಾದ ಯತೀನ್ ಹಾಗೂ...

Close