ರೋಟರಿ ಶಾಲೆ : ಶಿಕ್ಷಕ ರಕ್ಷಕ ಸಂಘದ ಸಭೆ

ಕಿನ್ನಿಗೋಳಿ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಅತ್ಯಂತ ಮಹತ್ತರವಾಗಿದ್ದು ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಸುವುದರ ಜತೆಗೆ ಸಮಾಜದಲ್ಲಿ ಗುರು ಹಿರಿಯರಿಗೆ ಗೌರವ ನೀಡಿ ಸನ್ನಡತೆಯಿಂದ ವ್ಯವಹರಿಸುವುದನ್ನೂ ಕಲಿಸಬೇಕಾಗಿದೆ ಎಂದು ಐಕಳ ಪೊಂಪೈ ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ ಹೇಳಿದರು.
ಶನಿವಾರ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಶಿಕ್ಷಕ ರಕ್ಷಕ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಠ ಸಾಧನೆಗೈದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ರೋಟರಿ ಆಧ್ಯಕ್ಷ ಕೆ.ಬಿ.ಸುರೇಶ್ ಆಧ್ಯಕ್ಷತೆ ವಹಿಸಿದ್ದರು.
ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಸತೀಶ್ಚಂದ್ರ ಹೆಗ್ಡೆ, ಕೋಶಾಧಿಕಾರಿ ವಿಲಿಯಂ ಸಿಕ್ವೇರಾ, ಉಪಾಧ್ಯಕ್ಷ ಜೆರೋಮ್ ಮೊರಾಸ್, ಶಿಕ್ಷಕ ರಕ್ಷಕ ಸಂಘದ ನಿರ್ಗಮನ ಆಧ್ಯಕ್ಷ ರಾಜೇಶ್ ಡಿಕೋಸ್ತಾ, ಸದಸ್ಯ ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸುನೀತಾ ಗುರುರಾಜ್ ಸ್ವಾಗತಿಸಿ, ನಯನಾ ಅತಿಥಿಗಳ ಪರಿಚಯ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಣಿಲ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Kinnigoli-07261803

Comments

comments

Comments are closed.

Read previous post:
Kinnigoli-07261802
ಹಳೆಯಂಗಡಿ: ಉಮಾನಾಥ ಕೋಟ್ಯಾನ್ ಸನ್ಮಾನ

ಹಳೆಯಂಗಡಿ: ಹಳೆಯಂಗಡಿ ಜಾರಂತಾಯ ದೈವಸ್ಥಾನದ ಸಭಾಭವನದಲ್ಲಿ ಹಳೆಯಂಗಡಿ ಗ್ರಾಮ ಸಮಿತಿ ವತಿಯಿಂದ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ...

Close