ಕರ್ನಿರೆ ವನಮಹೋತ್ಸವ

ಕಿನ್ನಿಗೋಳಿ : ಕರ್ನಿರೆ ಗ್ರಾಮಸ್ಥರು ಹಡಿಲು ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಮಾಡಬೇಕು ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಉದ್ಯಮಿ ಸಮಾಜ ಸೇವಕ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು
ಕರ್ನಿರೆ ಪೌಂಡೇಶನ್ ವತಿಯಿಂದ ಕರ್ನಿರೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆದ ಸಸಿ ವಿತರಣೆ, ವನಮಹೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಇಂದಿನ ದಿನಗಳಲ್ಲಿ ಕೃಷಿಯತ್ತ ಹಿಮ್ಮುಖವಾಗುತ್ತಿದ್ದಾರೆ ಅದಕ್ಕಾಗಿ ಗ್ರಾಮಕ್ಕೆ ಬೇಕಾದ ಕೃಷಿ ಸಲಕರಣ ನೀಡಲಾಗುದು, ಕರ್ನಿರೆ ಜನತೆಗೆ ಅಗತ್ಯವಿದ್ದ ಕುಡಿಯುವ ನೀರಿಗೆ ಬಾವಿ ರಚನೆ, ಗ್ರಾಮಕ್ಕೆ ಸ್ಮಶಾನ ನಿರ್ಮಾಣ, ಅಂತರ್ಜಲ ವೃದ್ದಿಗೆ ಮಳೆಕೊಯ್ಲು ಮತ್ತಿತರ ಸವಲತ್ತುಗಳನ್ನು ನೀಡಲಾಗುವುದು ಇದಕ್ಕೆ ಜನಪ್ರತಿನಿಗಳ ಸಹಕಾರ ಅಗತ್ಯ, ಗಿಡ ಮರಗಳನ್ನು ಬೆಳೆಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಬಳ್ಕುಂಜೆ ಚರ್ಚ್ ನ ಧರ್ಮಗುರು ಮೈಕಲ್ ಡಿಸಿಲ್ವಾ ಮಾತನಾಡಿ ನಾವು ನೆಟ್ಟ ಮರ ಫಲ ಕೊಟ್ಟಾಗ ಅದರಿಂದ ಆಗುವ ಸಂತೋಷವೇ ಬೇರೆ ಎಂದರು.
ಉದ್ಯಮಿ ಸಯ್ಯದ್ ಕರ್ನಿರೆ, ಅರಣ್ಯಾಕಾರಿ ಶ್ರೀಧರ್, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸ್ವರ್ಣ ಸುಂದರ್, ಕಲಾವಿದ ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ ಗಿಡ ಮರಗಳ ಅನಿವಾರ್ಯತೆ ಮತ್ತು ವನಮಹೊತ್ಸವದ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧಕರಾದ ಹರಿಶ್ಚಂದ್ರ ಶೆಟ್ಟಿ ಕರ್ನಿರೆ, ಗೋಪಾಲ ಭಂಡಾರಿ, ಚಂದ್ರ ಶೇಖರ ಶೆಟ್ಟಿ, ಶೇಖರ, ಕೃಷ್ಣ ಶೆಟ್ಟಿ, ಕವಾತ್ತಾರು ಪ್ರಭಾಕರ ಶೆಟ್ಟಿ, ರಿಚಾರ್ಡ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಾಲಾ ವಠಾರದಲ್ಲಿ ವನಮಹೋತ್ಸವ ಆಚರಿಸಲಾಯಿತು. ಗ್ರಾಮಸ್ಥರಿಗೆ ಹಣ್ಣು ಹಂಪಲು ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.
ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಪಲಿಮಾರು ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪುಟ್ರಾಡೋ, ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ, ಜಯಲಕ್ಷೀ, ಬಳ್ಕುಂಜೆಗುತ್ತು ನಾರಾಯಣ ಮಾಣೈ, ಉದ್ಯಮಿ ರಾಮ್ ಪ್ರಸಾದ್ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ಚಂದ್ರ ಶೆಟ್ಟಿ ಕರ್ನಿರೆ ಸ್ವಾಗತಿಸಿ, ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು.
Kinnigoli-07261806

Comments

comments

Comments are closed.

Read previous post:
Kinnigoli-07261805
ಗುತ್ತಕಾಡು : ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಗುತ್ತಕಾಡು ಅಂಬೆಡ್ಕರ್ ಸಭಾಭವನ ಸಮಿತಿಯ ವತಿಯಿಂದ ಮೂಲ್ಕಿ ಮೂಡಬಿದ್ರೆಯ ನೂತನ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಸಮಿತಿಯ ಗೌರಾವಾಧ್ಯಕ್ಷ ಕೃಷ್ಣ...

Close