ಕೆಮ್ರಾಲ್ : ಸ್ವಚ್ಚ ಗೆಳತಿ ಜಾಗೃತಿ ಅಭಿಯಾನ

ಕಿನ್ನಿಗೋಳಿ : ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡುತ್ತಿದ್ದು ಭೇಟಿ ಬಜಾವೊ ಭೇಟಿ ಪಡಾವೋ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಭ್ರೂಣ ಹತ್ಯೆಯನ್ನು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳಿಗೆ ಎಲ್ಲಿಯಾದರೂ ಯಾವುದೇ ರೀತಿಯ ತೊಂದರೆ ಬಂದಲ್ಲಿ ಮಾಹಿತಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶ್ಯಾಮಲಾ ಹೇಳಿದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವೃದ್ದಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೆಮ್ರಾಲ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಭೇಟಿ ಬಜಾವೂ ಭೇಟಿ ಪಡಾವೋ ಸ್ವಚ್ಚ ಗೆಳತಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಮೂಲ್ಕಿ ಸಮುದಾಯ ಕೇಂದ್ರದ ಡಾ. ಪೂರ್ಣಿಮಾ, ಕೊಲ್ಲೂರು ಆರ್ಯುರ್ವೇದಿಕ್ ಆಸ್ಪತ್ರೆಯ ಡಾ. ಶೋಭಾರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೋಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯರಾದ ಜೀವನ್ ಪ್ರಕಾಶ್, ವಜ್ರಾಕ್ಷಿ ಶೆಟ್ಟಿ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಪಂಚಾಯಿತಿ ಸದಸ್ಯರಾದ ಮಮತಾ, ಪ್ರಮೀಳಾ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆರಾದ ಬೇಬಿ ಸುಂದರ್ ಕೋಟ್ಯಾನ್, ಸಾವಿತ್ರಿ, ಗ್ರಾಮಕರಣಿಕ ಸಂತೋಷ್, ಪಿ.ಡಿ.ಒ ರಮೇಶ್ ರಾಥೋಡ್, ಸುಜಾತ ವಾಸುದೇವ, ಶಿಕ್ಷಕರಾದ ಉಷಾ ನರೇಂದ್ರ ಕೆರೆಕಾಡು, ಸುಮತಿ, ಕಾರ್ಯದರ್ಶಿ ಕೇಶವ ದೇವಾಡಿಗ ಉಪಸ್ಥಿತರಿದ್ದರು.
ಶೀಲಾವತಿ ಸ್ವಾಗತಿಸಿ, ಪ್ರೇಮಲತಾ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Kinnigoli-07261807

Comments

comments

Comments are closed.

Read previous post:
Kinnigoli-07261806
ಕರ್ನಿರೆ ವನಮಹೋತ್ಸವ

ಕಿನ್ನಿಗೋಳಿ : ಕರ್ನಿರೆ ಗ್ರಾಮಸ್ಥರು ಹಡಿಲು ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಮಾಡಬೇಕು ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಉದ್ಯಮಿ ಸಮಾಜ ಸೇವಕ ಕರ್ನಿರೆ ವಿಶ್ವನಾಥ...

Close