ಹಳೆಯಂಗಡಿ ಲಯನ್ಸ್ ಕ್ಲಬ್ ಪದಗ್ರಹಣ

ಸುರತ್ಕಲ್: ಲಯನ್ಸ್ ಕ್ಲಬ್ ಸೇವಾ ಮನೋಭಾವ, ಅರ್ಪಣೆ, ಶ್ರದ್ಧೆ ಅಂಶಗಳನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ನಿರಂತರವಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದೆ ಎಂದು ಲಯನ್ಸ್ ನ ಜಿಲ್ಲಾ ಗವರ್ನರ್ ರೊನಾಲ್ಡ್ ಐಸಕ್ ಗೋಮ್ಸ್ ಹೇಳಿದರು
ಸುರತ್ಕನ್ ಸೂರಜ್ ಸಭಾಭವನದಲ್ಲಿ ನಡೆದ ಹಳೆಯಗಡಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಸಿ ಮಾತನಾಡಿ ಲಯನ್ಸ್ ಸಂಸ್ಥೆ ಸ್ನೇಹ ಮತ್ತು ಸೇವೆ ಎಂಬ ಧ್ಯೇಯದೊಂದಿಗೆ ವಿಶ್ವದಾದ್ಯಂತ ತನ್ನದೇ ಆದ ನಿಟ್ಟಿನಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದೆ. ಎಂದರು
ನೂತನ ಅಧ್ಯಕ್ಷ ಯಶೋಧರ ಸಾಲಿಯಾನ್ ಮಾತನಾಡಿ ಲಯನ್ಸ್ ಸಂಸ್ಥೆಯಿಂದ ಈಗಾಗಲೇ ಆರೋಗ್ಯ ತಪಾಸಣಾ ಶಿಬಿರ ಮಧುಮೇಹ ಬಗ್ಗೆ ಅರಿವು ಮೂಡಿಸುವುದು, ಪರಿಸರ ಹಾಗೂ ನೀರಿನ ಸಂರಕ್ಷಣೆ, ಸ್ವಚ್ಛ ಭಾರತ, ವಿದ್ಯಾಭ್ಯಾಸಕ್ಕೆ ನೆರವು, ಕಣ್ಣಿನ ತಪಾಸಣೆ, ರಕ್ತದಾನ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ, ಈ ಬಾರಿ ಅಧ್ಯಕ್ಷ ಸ್ಥಾನದಲ್ಲಿಕೊಂಡು ಸಾಕಷ್ಟು ಸಮಾಜಮುಖಿ ಕೆಲಸವನ್ನು ಮಾಡುತ್ತೇನೆ. ಎಂದರು.
ಲಯನ್ಸ್ ನ ಜಿಲ್ಲಾ ಗವರ್ನರ್ ರೊನಾಲ್ಡ್ ಐಸಕ್ ಗೋಮ್ಸ್ ನೂತನ ಅಧ್ಯಕ್ಷ ಯಶೋಧರ್ ಸಾಲಿಯಾನ್ ತಂಡಕ್ಕೆ ಪದಗ್ರಹಣ ನಡೆಸಿಕೊಟ್ಟರು,
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಅನು, ಭವ ಮತ್ತು ದೇವಿಕ ಅವರನ್ನು ಸನ್ಮಾನಿಸಲಾಯಿತು. ಹಳೆಯಂಗಡಿ ಅಂಗನವಾಡಿ ಕೇಂದ್ರ, ವೈದ್ಯಕೀಯ ಚಿಕಿತ್ಸೆ, ಕ್ರೀಡೆಗೆ ನೆರವು ವಿವಿಧ ಸೇವಾಕಾರ್ಯಗಳನ್ನು ನಡೆಸಲಾಯಿತು,
ಈ ಸಂದರ್ಭ ನಿರ್ಗಮನ ಅಧ್ಯಕ್ಷ ವಾಸು ನಾಯ್ಕ್, ಅಧ್ಯಕ್ಷ ಯಶೋಧರ ಸಾಲಿಯಾನ್, ಕಾರ್ಯದರ್ಶಿ ರಾಕೇಶ್ ಆರ್ ಸಾಲಿಯಾನ್, ಕೋಶಾಧಿಕಾರಿ ರಮೇಶ್ ರಾಥೋಡ್, ನಿರ್ಗಮ ಅಧ್ಯಕ್ಷ ವಾಸು ನಾಯ್ಕ್, ಉಪಾಧ್ಯಕ್ಷ ಬಾಸ್ಕರ ಸಾಲಿಯಾನ್, ಜಯಶ್ರೀ ಯಾದವ ಕೋಟ್ಯಾನ್, ಲಿಯೋ ಕ್ಲಬ್ ಅಧ್ಯಕ್ಷ ನೇಹ ವೈ ದೇವಾಡಿಗ, ಕಾರ್ಯದರ್ಶಿ ಸೌರಬ್ ಬಿ ಸಾಲಿಯಾನ್, ಕೋಶಾಧಿಕಾರಿ ಚಿರಾಗ್ ಜೆ ಕೋಟ್ಯಾನ್, ವಸಂತ್ ಬೆರ್ನಾಡ್, ಬ್ರಿಜೇಶ್ ಕುಮಾರ್, ರಶ್ಮೀ ಆರ್ ಕನ್ನಡ, ಚಂದ್ರಹಾಸ್, ಜಯ ಜಿ ಸುವರ್ಣ, ಚಂದ್ರಶೇಖರ ನಾನಿಲ್, ಯಾದವ ದೇವಡಿಗ ಮೋಹನ್ ಎಸ್ ಸುವರ್ಣ, ರಮೇಶ್ ಬಂಗೇರ, ಗಣೇಶ್ ಅಮೀನ್ ಸಂಕಮಾರ್, ಶ್ರೀನಿವಾಸ ಅಮೀನ್, ಜಯಕೃಷ್ಣ ಬಿ ಕೋಟ್ಯಾನ್, ನವೀನ್ ಶೆಟ್ಟಿ, ಜಯಾನಂದ ಸುವರ್ಣ, ಸುರೇಂದ್ರ ಸಾಲಿಯಾನ್, ನವೀನ್ ಚಂದ್ರ ಅಮೀನ್, ದಾಮೋಧರ್ ಸುವರ್ಣ, ಜಗದೀಶ್ ಬಾಳ, ಶರತ್, ಲೋಕೇಶ್ ಚಿಲಿಂಬಿ, ನಿಕಿಲ್ ವೈ ದೇವಾಡಿಗ ಗಿರೀಶ್ ಎಚ್.ಎಂ, ಪ್ರಜ್ವಿತ್ ಜೆ ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ವಾಸು ನಾಯ್ಕ್ ಸ್ವಾಗತಿಸಿದರು, ರಮೇಶ್ ರಾಥೋಡ್ ಧನ್ಯವಾದ ಸಮರ್ಪಿಸಿದರು ಕಾರ್ಯದರ್ಶಿ ರಾಕೇಶ್ ಆರ್ ಸಾಲಿಯಾನ್ ವರಧಿ ವಾಚಿಸಿದರು ಬಾಸ್ಕರ ಸಾಲಿಯಾನ್ ನಿರೂಪಿಸಿದರು.

Kinnigoli-07281802

 

Comments

comments

Comments are closed.

Read previous post:
Kinnigoli-07281801
ಮೆನ್ನಬೆಟ್ಟು ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ರಾಮಕೃಷ್ಣ ಮಿಷನ್ ಮಂಗಳೂರು ಆಶ್ರಯದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಭ್ರಾಮರಿ ಮಹಿಳಾ ಸಮಾಜ ಮೆನ್ನಬೆಟ್ಟು ಇವರು ಜಂಟಿಯಾಗಿ ರಾಜರತ್ನಪುರ ಅಂಗನವಾಡಿ ಕೇಂದ್ರದ ಪರಿಸರದಲ್ಲಿ...

Close