ಹಳೆಯಂಗಡಿ ಪಂಚಾಯಿತಿ ಆಡಳಿತಕ್ಕೆ ಗ್ರಹಣ???

ಕಿನ್ನಿಗೋಳಿ : ಕೆಲವು ಗಂಟೆಗಳ ಚಂದ್ರ ಗ್ರಹಣ ಬಂದು ಹೋಗಿದೆ ಆದರೆ ಕಳೆದ ಮೂರು ವರ್ಷದಿಂದ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಗ್ರಹಣ ಬಡಿದಿದೆಯೇ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿಯ ಆಡಳಿತದ ವಿರುದ್ಧ ಶನಿವಾರ ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿಯ ವತಿಯಿಂದ ಪ್ರತಿಭಟನಾ ಸಭೆಯಲ್ಲಿ ಕೇಳಿ ಬಂತು.
ಇತ್ತೀಚೆಗೆ ಹಳೆಯಂಗಡಿ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲು ನಿವಾಸಿ ಯತೀಶ್ ಕುಮಾರ್ ಅವರು ತಮ್ಮ ದೇಜಪ್ಪ ಕೋಟ್ಯಾನ್ ಹೆಸರಿನಲ್ಲಿರುವ ಕಟ್ಟಡದ ತೆರಿಗೆಯನ್ನು ಪಾವತಿಸಲು ಹೋದಾಗ ತೆರಿಗೆಯನ್ನು ಸ್ವೀಕರಿಸಲಿಲ್ಲ. ಈ ಬಗ್ಗೆ ಪಿಡಿಒರನ್ನು ವಿಚಾರಿಸಿದಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪಂಚತಂತ್ರದಲ್ಲಿ ಪರಿಶೀಲಿಸಿದಾಗ ಕಟ್ಟಡದ ಸಂಖ್ಯೆಯು ಪಂಚತಂತ್ರದಲ್ಲಿ ದಾಖಲೆಯಾಗಿದ್ದು ದೃಢಪಟ್ಟಿದೆ. ಜುಲ್ಯೆ ೧೮ರಂದು ನಡೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಿದಾಗ ಅಧ್ಯಕ್ಷರು ಮತ್ತು ಪಿಡಿಒ ಅವರು ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಜುಲ್ಯೆ 24 ರಂದು ಯತೀಶ್ ಅವರು ಪಂಚಾಯಿತಿ ನಲ್ಲಿ ಪಿಡಿಒ ಅವರಲ್ಲಿ ವಿಚಾರಿಸುತ್ತಿರುವಾಗ ತಮ್ಮ ಕೊಠಡಿಯಿಂದ ಹೊರ ಬಂದ ಅಧ್ಯಕ್ಷೆ ಜಲಜ ಪಾಣರ್ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಆ ಬಳಿಕ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಯತೀಶ್ ವಿರುದ್ದ ಜಾತಿ ನಿಂದನೆ ಬಗ್ಗೆ ದೂರು ದಾಖಲಿಸಿದ್ದಾರೆ. ಸುಳ್ಳು ದೂರು ದಾಖಲಿಸಿರುವ ಬಗ್ಗೆ ದೂರನ್ನು ಹಿಂದೆಗೆಯಬೇಕೆಂದು ಪ್ರತಿಭಟನೆ ನಡೆಯಿತು.
ಮಂಗಳೂರು ತಾಲೂಕಿನಲ್ಲಿ 1 ಕೋಟಿಗೂ ಮಿಕ್ಕಿ ಆದಾಯವನ್ನು ಹೊಂದಿರುವ ಮೂರು ಗ್ರಾಮ ಪಂಚಾಯಿತಿಗಳಾದ ಬಜಪೆ, ಕಿನ್ನಿಗೋಳಿ, ಹಳೆಯಂಗಡಿಗಳಲ್ಲಿ ಹಳೆಯಂಗಡಿ ಪಂಚಾಯಿತಿ ಒಂದಾಗಿದ್ದು ಆದರೆ ಅಭಿವೃದ್ದಿ ಕುಂಠಿತಗೊಂಡಿದೆ. ಕೇವಲ ಇಂದಿರಾನಗರ ಮತ್ತು ತಮ್ಮಿಷ್ಟದ ವಾರ್ಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಾಗುತ್ತಿದೆ. ಉಳಿದ ವಾರ್ಡ್‌ಗಳನ್ನು ಕಡೆಗಣಿಸಲಾಗುತ್ತಿದೆ. ಪಂಚಾಯಿತಿಯ ಭೃಷ್ತಾಚಾರ ತುಂಬಿ ತುಳುಕುತ್ತಿದ್ದು ಅಧ್ಯಕ್ಷರ ಜಾತಿ ತಾರತಮ್ಯ, ಅಭಿವೃದ್ಧಿ ತಾರತಮ್ಯ, ಆಡಳಿತ ಗ್ರಾಮ ಪಂಚಾಯಿತಿ ಸದಸ್ಯರ ಭ್ರಷ್ಟಾಚಾರ, ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆಯನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಕೂಡಲೆ ತಮ್ಮ ನಿಲುವನ್ನು ಬದಲಿಸದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು.
ಪಂಚಾಯಿತಿ ಅಧ್ಯಕ್ಷರು ದಲಿತ ಸಮುದಾಯದ ವರ್ಗವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಈಗಾಗಲೇ ನ್ಯಾಯಯುತ ಬೇಡಿಕೆಗಳನ್ನು ಕೇಳಿದ ಖಾಸಿಂ ಸಾಹೇಬ್, ರಮೇಶ್ ಅಂಚನ್ ಸೇರಿ ಕೆಲವು ಮಂದಿಗೆ ದಲಿತ ದೌರ್ಜನ್ಯ ಕೇಸು ದಾಖಲಿಸಿ ಗ್ರಾಮಸ್ಥರು ಹಾಗೂ ಜನ ಸಾಮಾನ್ಯರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ, ಪಂಚಾಯಿತಿಯಲ್ಲಿ ಅಭಿವೃದ್ಧಿ ನಡೆಸಲು ಸಾಧ್ಯವಾಗದೇ ಇದ್ದಲ್ಲಿ ರಾಜೀನಾಮೆ ಕೊಡಲಿ, ದಲಿತ ದೌರ್ಜನ್ಯ ಕಾನೂನನ್ನು ದುರುಪಯೋಗ ಮಾಡುವುದು ತರವಲ್ಲ. ಹಾಕಿದ ಕೇಸನ್ನು ಕೂಡಲೆ ಹಿಂಪಡಯಬೇಕು ಎಂದು ಎಸ್ಸಿ ಎಸ್ಟಿ ಮೋರ್ಚಾದ ವಿಠಲ ಕೆ.ಎಸ್.ರಾವ್.ನಗರ ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಗೆ ಆಗಮಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರಲ್ಲಿ ಮನವಿಯನ್ನು ಸಲ್ಲಿಸಿದರು. ಪ್ರತಿಕ್ರಿಯಿಸಿದ ಶಾಸಕರು ಅಧ್ಯಕ್ಷ ಸ್ಥಾನ ಸಮುದಾಯಕ್ಕೆ ಸಿಕ್ಕ ಗೌರವ ಎಂದು ಭಾವಿಸಿ ಅಧಿಕಾರ ಚಲಾಯಿಸಬೇಕು, ಅಧಿಕಾರದ ದುರ್ಬಳಕೆ ಮಾಡಬಾರದು. ನ್ಯಾಯಕ್ಕೆ ಬೆಲೆಕೊಡಬೇಕು ಸುಳ್ಳು ಕೇಸು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಎಸಿಪಿ ಮೂಲಕ ಸೂಕ್ತ ತನಿಖೆ ನಡೆಸಲಾಗುವುದು. ಜನಪ್ರತಿನಿಧಿಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು, ಯಾರಿಗೂ ಅಧಿಕಾರ ಶಾಶ್ವತವಲ್ಲ. ಮುಂದಿನ ದಿನಗಳಲ್ಲಿ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ತಮ್ಮ ವರ್ತನೆಯನ್ನು ಬದಲಾಯಿಸಿ ಉತ್ತಮ ಆಡಳಿತ ನೀಡಬಹುದೆಂಬ ಆಶಾ ಭಾವನೆಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಪಣಂಬೂರು ಎಸಿಪಿ ರಾಜೇಂದ್ರ ಅವರಿಗೂ ಮನವಿಯನ್ನು ಸಲ್ಲಿಸಲಾಯಿತು.

ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಶೋಭೇಂದ್ರ ಸಸಿಹಿತ್ಲು, ನರೇಂದ್ರ ಪ್ರಭು, ಸದಾಶಿವ ಇಂದಿರಾನಗರ, ಚಿತ್ರಾ ಸುಕೇಶ್, ಅಶೋಕ್ ಬಂಗೇರ, ಎಸ್.ಎಸ್.ಸತೀಶ್ ಭಟ್ ಮತ್ತಿತರರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ರಶ್ಮಿ ಆಚಾರ್ಯ, ಶರತ್ ಕುಬೆವೂರು, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಪಡುಪಣಂಬೂರು ಪಂಚಾಯಿತಿಯ ಮಂಜುಳಾ, ಹಳೆಯಂಗಡಿ ಪಂಚಾಯಿತಿಯ ವಿನೋದ್‌ಕುಮಾರ್ ಕೊಳುವೈಲು, ಸುಖೇಶ್ ಪಾವಂಜೆ, ಸುಗಂಧಿ, ಬೇಬಿ ಸುಲೋಚನ, ಜಯಂತಿ, ಬಿಜೆಪಿಯ ಸದಾಶಿವ ಅಂಚನ್ ಚಿಲಿಂಬಿ, ಸಂತೋಷ್ ಆರ್. ಶೆಟ್ಟಿ, ಮನೋಜ್‌ಕುಮಾರ್, ರಾಮಚಂದ್ರ ಶೆಣೈ, ಹಿಮಕರ್, ಕೃಷ್ಣಪ್ಪ, ಹರೀಶ್, ಅನಿಲ್ ಕುಂದರ್, ಆನಂದ ಸುವರ್ಣ, ಶಂಕರ ಬಂಗೇರ, ಉದಯ ಸುವರ್ಣ, ವಾಸುದೇವ ಸಾಲ್ಯಾನ್, ಶೇಖರ್ ದೇವಾಡಿಗ, ಸುನಿಲ್ ಪಾವಂಜೆ, ದೇವದಾಸ್, ಶಶಿ, ಸಾವಿತ್ರಿ, ಸುಲೋಚನ ಮತ್ತಿತರರು ಉಪಸ್ಥಿತರಿದ್ದರು. ಇದ್ದರು.
ಮೂಲ್ಕಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.

Kinnigoli-07281804 Kinnigoli-07281805 Kinnigoli-07281806 Kinnigoli-07281807

Comments

comments

Comments are closed.