ಕೊಲ್ಲೂರು ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸರಿಯಾದ ವೇದಿಕೆಯಾಗಿದೆ, ಶಿಕ್ಷಕರು ಮತ್ತು ರಕ್ಷಕರು ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ಮಕ್ಕಳಿಗೆ ಗುರಿ ಮುಟ್ಟಲು ಸಾಧ್ಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಕೊಲ್ಲೂರು ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೋಳ್ಳೂರು ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್, ಸದಸ್ಯರಾದ ನವೀನ್, ಆನಂದ್ ಕೊಲ್ಲೂರು, ಗೀತಾ ನಾಯ್ಕ್, ವಿನೋದ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರೇಮಾ ನಾಯ್ಕ್, ಐತಪ್ಪ ಸಾಲಿಯನ್, ಡಾ. ಶೋಭಾ ರಾಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ ಉಪಸ್ಥಿತರಿದ್ದರು.
ಪದ್ಮನೂರು ಕ್ಲಸ್ಟರ್ ಸಿ.ಆರ್ ಪಿ ರಾಮದಾಸ್ ಭಟ್ ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾಕ್ಷಿ ಸ್ವಾಗತಿಸಿದರು. ಸುನಿತಾ ವಂದಿಸಿದರು. ಸುಕುಮಾರ್ ನಿರೂಪಿಸಿದರು.

Kinnigoli-07281803

Comments

comments

Comments are closed.

Read previous post:
Kinnigoli-07281802
ಹಳೆಯಂಗಡಿ ಲಯನ್ಸ್ ಕ್ಲಬ್ ಪದಗ್ರಹಣ

ಸುರತ್ಕಲ್: ಲಯನ್ಸ್ ಕ್ಲಬ್ ಸೇವಾ ಮನೋಭಾವ, ಅರ್ಪಣೆ, ಶ್ರದ್ಧೆ ಅಂಶಗಳನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ನಿರಂತರವಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದೆ ಎಂದು ಲಯನ್ಸ್ ನ ಜಿಲ್ಲಾ ಗವರ್ನರ್ ರೊನಾಲ್ಡ್...

Close