ಕಟೀಲು ಗ್ರಾಮ ಸಭೆ

ಕಟೀಲು : ಕೊಂಡೆಮೂಲ ನಡುಗೋಡು ಕಿಲೆಂಜೂರು ಗ್ರಾಮಗಳನ್ನೊಳಗೊಂಡ ಕಟೀಲು ಗ್ರಾಮ ಪಂಚಾಯಿತಿಯ 2018-19 ರ ಪ್ರಥಮ ಹಂತದ ಗ್ರಾಮ ಸಭೆ ಕಟೀಲು ಗ್ಯಾಂಡ್ ಹಾಲ್‌ನಲ್ಲಿ ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕಟೀಲು ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆ ಬದಿಯಲ್ಲೇ ರೇಶನ್ ಅಂಗಡಿ ಇದೆ ಜನ ಮುಖ್ಯ ರಸ್ತೆಯಲ್ಲಿಯೇ ನಿಲ್ಲಬೇಕಾದ ಪ್ರಮೇಯವಿದೆ. ಗ್ರಾಹಕರಿಗೆ ಇದರಿಂದ ತೊಂದರೆ ಆಗುತ್ತದೆ ಎಂದು ಸಂಜೀವ ಮಡಿವಾಳ ಹೇಳಿದರು. ಇದಕ್ಕೆ ಉತ್ತರಿಸಿದ ಪಿ.ಡಿ.ಒ ಪ್ರಕಾಶ್ ಈ ವಿಷಯ ವಾರ್ಡ್ ಸಭೆಯಲ್ಲಿ ಚರ್ಚೆ ಆಗಿದೆ ಅಲ್ಲದೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು. ಇದಕ್ಕೆ ಉತ್ತರಿಸಿದ ರೇಷನ್ ಅಂಗಡಿಯ ಮಾಲಕರು ಸರ್ವರ್ ಸಮಸ್ಯೆ ಇರುವಾಗ ಮಾತ್ರ ಜನ ಇರುತ್ತಾರೆ ಇಲ್ಲದಿದ್ದಲ್ಲಿ ಜನ ಕಡಿಮೆ ಇರುತ್ತಾರೆ ಎಂದರು.
ಕಟೀಲು ಪರಿಸರದಲ್ಲಿ ಪರವಾನಿಗೆ ರಹಿತ ಅನೇಕ ಅಂಗಡಿಗಳು ಕಾರ್ಯಾಚರಿಸುತ್ತಿದೆ ಈ ಬಗ್ಗೆ ಹಿಂದಿನ ಗ್ರಾಮ ಸಭೆಯಲ್ಲೂ ಪ್ರಸಾವಿಸಿದರೂ ಇನ್ನೂ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಸಂಜೀವ ಮಡಿವಾಳ ಆರೋಪಿಸಿದರು, ಈ ಬಗ್ಗೆ ಉತ್ತರಿಸಿದ ಕಟೀಲು ದೇವಳದ ಪ್ರಬಂಧಕ ತಾರನಾಥ ಶೆಟ್ಟಿ ಮಾತನಾಡಿ ದೇವಳದ ಸುಪರ್ದಿಯಲ್ಲಿರುವ ಅಂಗಡಿ ಪರವಾನಿಗೆಗಾಗಿ 2013ರ ರಿಂದಲೂ ಮನವಿ ಸಲ್ಲಿಸಿದ್ದೇವೆ ಆದರೆ ಇದುವರೆಗೆ ದೊರೆತಿಲ್ಲ ಎಂದರು. ಈ ಬಗ್ಗೆ ನೋಡೆಲ್ ಅಧಿಕಾರಿಯವರು ಮಾತನಾಡಿ ಈ ಸಮಸ್ಯೆಗೆ ಸಮಬಂದಪಟ್ಟವರ ಪ್ರತ್ಯೇಕ ಸಭೆ ಕರೆದು ಸಮಸ್ಯೆ ಪರಿಹರಿಸಬಹುದು ಎಂದರು.
ಜುಮಾದಿ ಗುಡ್ಡೆ ಪ್ರದೇಶದ ಜನರಿಗೆ ಹಕ್ಕುಪತ್ರ ಸಿಕ್ಕಿಲ್ಲ, ಸರಕಾರದ ಯೋಜನೆಗಳ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ, ಕಟೀಲಿನಲ್ಲಿ ಪೋಲೀಸ್ ಔಟ್ ಪೋಸ್ಟ್, ಕಟೀಲು ದೇವಳ ಪರಿಸರ ಹಾಗೂ ಸೇತುವೆಯ ಬಳಿ ಸಿ.ಸಿ ಕ್ಯಾಮಾರ ಅಳವಡಿಕೆ, ಉಲ್ಲಂಜೆ ಕಿರುಸೇತುವೆ ಅಗಲೀಕರಣ, ಕೊಂಡೇಲ ರಸ್ತೆಬದಿ ಹಾಗೂ ಸಿತ್ಲ ಬಳಿ ತ್ಯಾಜ್ಯ ಸಮಸ್ಯೆ, ದಾರಿದೀಪ ಅವ್ಯವಸ್ಥೆ ಮುಂತಾದ ಸಮಸ್ಯೆಗಳ ಚರ್ಚೆ ನಡೆಯಿತು.
ತೋಟಗಾರಿಕೆ ಇಲಾಖೆಯ ಕಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಗ್ರಾಮಕರಣಿಕ ಪ್ರದೀಪ್ ಶೆಣೈ, ಪೋಲೀಸ್ ಇಲಾಖೆಯ ಧನರಾಜ್, ಪಂಚಾಯತ್ ರಾಜ್ ಇಂಜಿನೀಯರ್ ಹರೀಶ್, ಅರಣ್ಯ ಇಲಾಖೆಯ ರಾಜು, ಪಶುವೈದ್ಯಾಧಿಕಾರಿ ಸಿ.ಆರ್.ರಂಗನಾಥ್, ಕೃಷಿ ಅಧಿಕಾರಿ ಅಬ್ದುಲ್ ಬಷೀರ್, ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಸ್ಕರ್ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ಕಾತ್ಯಾಯನಿ ಮಾಹಿತಿಗಳಾನ್ನು ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಪದ್ಮಲತಾ, ಅರುಣ್ ಕುಮಾರ್, ಜನಾರ್ಧನ ಕಿಲೆಂಜೂರು, ಬೇಬಿ, ರತ್ನಾ, ಪುಷ್ಪ, ಜಯಂತಿ, ತಿಲಕ್ ರಾಜ್ ಶೆಟ್ಟಿ, ದಯಾನಂದ ಶೆಟ್ಟಿ, ರಮಾನಂದ ಪೂಜಾರಿ, ಸುದೀರ್ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಪಿ.ಡಿ.ಒ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07311803

 

Comments

comments

Comments are closed.

Read previous post:
Kinnigoli-07311802
ಪಂಜ : ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ರೀತಿಯ ಪ್ರತಿಭೆಗಳು ಇದೆ ಅದನ್ನು ಹೊರತರುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಕ್ಷೇತ್ರ...

Close