ಕಿನ್ನಿಗೋಳಿ ವ್ಯ.ಸೇ.ಸ. ಸಂ.ನಿ. ವಾರ್ಷಿಕ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ದ 2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇಕಾರ ಸೌಧದಲ್ಲಿ ಭಾನುವಾರ ನಡೆಯಿತು.
ಪ್ರಸ್ತುತ 6684 ಮೆಂಬರರಿದ್ದು 18812130 ರೂ ಪಾಲು ಬಂಡವಾಳವಿದೆ. ಪಾಲು ಬಂಡವಾಳದಲ್ಲಿ ಶೇ. 11.56 ರಷ್ಟು ವೃದ್ಧಿಯಾಗಿರುತ್ತದೆ. ಸರ್ಕಾರಿ ಆದೇಶದಂತೆ ಕೃಷಿಕರಿಗೆ ಬೆಳೆಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡಲಾಗುತ್ತಿದೆ. ಕಾರ್ಯಕ್ಷೇತ್ರದ ಶಾಲೆಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಗಿದೆ. ಜನತಾ ನಿತ್ಯ ನಿಧಿ(ಪಿಗ್ಮಿ) ಯಶಸ್ವಿಯಾಗಿ ನಡೆಯುತ್ತಿದೆ. ಸುಮಾರು 200 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ವರದಿ ವರ್ಷದಲ್ಲಿ 9398000 ರೂ. ಸಾಲ ವಿತರಿಸಲಾಗಿದೆ. 10614805 ರೂ ಲಾಭ ಲಾಭ ಗಳಿಸಿದೆ. ಮೆಂಬರುಗಳಿಗೆ 16% ಡಿವಿಡೆಂಟ್ ನೀಡಲಾಗುತ್ತಿದೆ. ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ ಮಾಡ ವಾರ್ಷಿಕ ವರದಿಯಲ್ಲಿ ಹೇಳಿದರು.
ಈ ಸಂದರ್ಭ ನಿವೃತ್ತಿ ಹೊಂದಲಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ ಮಾಡ ಅವರಿಗೆ ವಿದಾಯ ಸನ್ಮಾನ ಮಾಡಲಾಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ನಿರ್ದೇಶಕರಾದ ರಘುರಾಮ ಅಡ್ಯಂತಾಯ, ಪುರಂದರ ಎಂ. ಶೆಟ್ಟಿ, ಪ್ರವೀಣ್ ಮಾಡ, ಲೋಕಯ್ಯ ಸಾಲ್ಯಾನ್, ನಾರಾಯಣ ಕುಂದರ್, ವನಜ ಎಸ್. ಶೆಟ್ಟಿ, ಮಾರ್ಗರೇಟ್ ವಾಸ್, ಶೀನ ಎಂ., ಶೇಷರಾಮ ಶೆಟ್ಟಿ ಉಪಸ್ಥಿತರಿದ್ದರು.

Kinnigoli-07311801

Comments

comments

Comments are closed.

Read previous post:
Kinnigoli-07281806
ಹಳೆಯಂಗಡಿ ಪಂಚಾಯಿತಿ ಆಡಳಿತಕ್ಕೆ ಗ್ರಹಣ???

ಕಿನ್ನಿಗೋಳಿ : ಕೆಲವು ಗಂಟೆಗಳ ಚಂದ್ರ ಗ್ರಹಣ ಬಂದು ಹೋಗಿದೆ ಆದರೆ ಕಳೆದ ಮೂರು ವರ್ಷದಿಂದ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಗ್ರಹಣ ಬಡಿದಿದೆಯೇ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿಯ...

Close