ಪಂಜ : ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ರೀತಿಯ ಪ್ರತಿಭೆಗಳು ಇದೆ ಅದನ್ನು ಹೊರತರುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರವಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಸಹಯೋಗದಲ್ಲಿ ಸೋಮವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಕೆಮ್ರಾಲ್ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಪಂಜ, ಸುಮತಿ ಪೂಜಾರಿ, ಆಶಾ, ಮಂಗಳೂರು ಉತ್ತರವಲಯ ಶಿಕ್ಷಣ ಸಂಯೋಜಕ ಹುಸ್ಮಾನ್, ಸಿ.ಆರ್.ಪಿ ಕುಸುಮ, ಕಾಟಿಪಳ್ಳ ಆರನೇ ಬ್ಲಾಕ್ ಸಿ.ಆರ್.ಪಿ ಶಾಂತ, ಸತೀಶ್ ಶೆಟ್ಟಿ ಬೈಲಗುತ್ತು, ಶಿಕ್ಷಕರಾದ ಜಯರಾಮ್, ಎಸ್.ಡಿ.ಎಂ ಸಿ ಅಧ್ಯಕ್ಷ ನವೀನ್ ಪಂಜ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಐರಿನ್ ಡಿಸೋಜ ಸ್ವಾಗತಿಸಿ, ಸುನೀತಾ ಡಿಸೋಜ ವಂದಿಸಿದರು. ಶಿಕ್ಷಕಿ ವಸಂತಿ ಕೆ ಕಾರ್ಯಕ್ರಮ ನಿರೂಪಿಸಿದರು.

Kinnigoli-07311802

Comments

comments

Comments are closed.

Read previous post:
Kinnigoli-07311801
ಕಿನ್ನಿಗೋಳಿ ವ್ಯ.ಸೇ.ಸ. ಸಂ.ನಿ. ವಾರ್ಷಿಕ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ದ 2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇಕಾರ...

Close