ಕಿನ್ನಿಗೋಳಿ ಬಿಜೆಪಿ ಪತ್ರಿಕಾ ಗೋಷ್ಠಿ

ಕಿನ್ನಿಗೋಳಿ : ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನ ಮನ್ನಣೆಯನ್ನು ಪಡೆಯುತ್ತಿದ್ದು ಅವರ ವಿರುದ್ದ ಪ್ರತಿಷ್ಠಿತ ದಿನ ಪತ್ರಿಕೆಯೊಂದರಲ್ಲಿ ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಸುಳ್ಳು ವರದಿಯನ್ನು ಪ್ರಕಟಿಸಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಕಾರ್ಯ ಮಾಡಿದ್ದು ಇದನ್ನು ಖಂಡಿಸುವುದಾಗಿ ಮುಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು ಹೇಳಿದರು.
ಕಿನ್ನಿಗೋಳಿ ಯುಗಪುರುಷದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚೆಗೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಕಣ್ಮರೆ ಪ್ರಕರಣ ಸೇರಿದಂತೆ ೧೮ ಪ್ರಶ್ನೆಗಳನ್ನು ಕೇಳಿದ್ದರು. ಆ ಬಳಿಕ ಎನ್ ಜಿ ಓ ಒಂದರ ವರದಿ ಆಧರಿಸಿ ಪ್ರತಿಷ್ಠಿತ ದಿನ ಪ್ರಮುಖ ದಿನ ಪತ್ರಿಕೆಯೊಂದರಲ್ಲಿ ಮಾನವ ಕಳ್ಳ ಸಾಗಾಟ ಪ್ರಕರಣದಲ್ಲಿ ರಾಜ್ಯದಲ್ಲಿ ಕೇವಲ ಉಮಾನಾಥ ಕೋಟ್ಯಾನ್ ರವರ ಹೆಸರನ್ನು ಉಲ್ಲೇಖಿಸಿತ್ತು ಇದರ ಹಿಂದೆ ಕಾಣದ ಕ್ಯೆಗಳು ಹಾಗೂ ಮಾಫಿಯಾ ಕ್ಯೆವಾಡವಿರುವ ಗುಮಾನಿ ಕಂಡು ಬರುತ್ತಿದೆ. ಕಾರ್ಯಕರ್ತರಿಗೆ ಮತ್ತು ಜನ ಸಾಮಾನ್ಯರಿಗೆ ಈ ವಿಷಯ ಕೇಳಿ ಆಶ್ಚರ್ಯಗೊಂಡಿದ್ದಾರೆ. ಪಕ್ಷದ ವತಿಯಿಂದ ವರದಿ ನೀಡಿರುವವರ ಹಾಗೂ ಪ್ರಕಟಿಸಿರುವುದವರ ವಿರುದ್ದ ಕಾನೂನು ಸಲಹೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂತಹ ಕಪೋಲ ಕಲ್ಪಿತ ವರದಿಗಳನ್ನು ಪ್ರಕಟಿಸುವವರ ವಿರುದ್ದ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಕ್ಷೇತ್ರದ ಅಭಿವೃದ್ದಿ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುವ ಕ್ಷೇತ್ರದ ಶಾಸಕರಿಗೆ ಪಕ್ಷದ ಕಾರ್ಯಕರ್ತರೆಲ್ಲರೂ ನ್ಯೆತಿಕ ಬೆಂಬಲವನ್ನು ನೀಡಲು ನಿರ್ಧರಿಸಿದ್ದು ಇನ್ನು ಮುಂದಕ್ಕೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಪ್ರಕಟಿಸುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭ ಮುಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ದೇವಾಡಿಗ, ಸುಖೇಶ್ ಶೆಟ್ಟಿ ಶಿರ್ತಾಡಿ, ಜಿಲ್ಲಾ ಸಮಿತಿಯ ಕೆ ಭುವನಾಭಿರಾಮ ಉಡುಪ ಮತ್ತು ರಮಾನಾಥ ಅತ್ತಾರ್ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-08041804
ಕಿನ್ನಿಗೋಳಿ ರಿಕ್ಷಾ ಸಂಘ ಅಧ್ಯಕ್ಷ : ಹಾಜಬ್ಬ ಗುತ್ತಕಾಡು

ಕಿನ್ನಿಗೋಳಿ : ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಹಾಜಬ್ಬ ಗುತ್ತಕಾಡು, ಗೌರವಾಧ್ಯಕ್ಷರಾಗಿ ಭುವನಾಭಿರಾಮ ಉಡುಪ, ಉಪಾಧ್ಯಕ್ಷರಾಗಿ ಗಿರಿಯಪ್ಪ ಮುಚ್ಚೂರು, ನಾಗರಾಜ ಮೂರುಕಾವೇರಿ, ಎಸ್. ಕರುಣಾಕರ ಶೆಟ್ಟಿ...

Close