ಕಿನ್ನಿಗೋಳಿ : ಪಾವ್ಸ ಖೇಳ್ 2018

ಕಿನ್ನಿಗೋಳಿ : ಕ್ರೀಡಾ ಮನೋಭಾವದಿಂದ ಆಟೋಟದಲ್ಲಿ ಭಾಗವಹಿಸಬೇಕು ಬದುಕಿನಲ್ಲಿ ಎಲ್ಲಕ್ಕಿಂತಲೂ ಆರೋಗ್ಯ ಅತೀ ಮುಖ್ಯ. ಎಲ್ಲರಿಗೂ ಆರೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುವ ವೈಜಾನಿಕ ಕ್ರಮವೇ ಕ್ರೀಡೆಯಾಗಿದೆ. ಕ್ರೀಡೋತ್ಸವಗಳಲ್ಲಿ ಯುವಜನತೆ ಆಸಕ್ತಿಯಲ್ಲಿ ಭಾಗವಹಿಸಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ಮ್ಯಾಥ್ಯೂ ವಾಸ್ ಹೇಳಿದರು.
ಕಿನ್ನಿಗೋಳಿ ಕೊಸೆಸಾಂವ್ ಚರ್ಚ್ ಹಾಗೂ ಭಾರತೀಯ ಕೆಥೋಲಿಕ್ ಯುವ ಸಂಚಾಲನ ಕಿನ್ನಿಗೋಳಿ ಘಟಕದ ಜಂಟೀ ಆಶ್ರಯದಲ್ಲಿ ಪಾವ್ಸಾ ಖೆಳ್ ೨೦೧೮ ಕ್ರೀಡಾಕೂಟದಲ್ಲಿ ಮಾತನಾಡಿದರು.
ಈ ಸಂದರ್ಭ ಫಾ. ರಾಹುಲ್ ಡೆಕ್ಸ್ಟರ್, ಫಾ. ಸ್ಟಾನಿ ಪಿಂಟೊ, ಫಾ.ರೂಪೇಶ್ ತಾವ್ರೊ, ಭಗಿನಿ ಲಿಡಿಯಾ ಹಾಗೂ ಕಿನ್ನಿಗೋಳಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ ಉಪಸ್ಥಿತರಿದ್ದರು.
ಕಿನ್ನಿಗೋಳಿ ಐಸಿವೈಎಮ್ ಅಧ್ಯಕ್ಷ ಪ್ರೀತಮ್ ರೇಗೋ ಸ್ವಾಗತಿಸಿದರು. ಕಾರ್ಯದರ್ಶಿ ಕ್ರಿಸ್ಟನ್ ಡಿಸೋಜ ವಂದಿಸಿದರು. ಸ್ವೀಡಲ್ ಗೋಮ್ಸ್ ಕಾರ್ಯಕ್ರಮ ನಿರೂಪಿಸಿದರು.
ಕಿನ್ನಿಗೋಳಿ ಚರ್ಚ್ ವ್ಯಾಪ್ತಿಯ ವಾರ್ಡುಗಳ ನಡುವೆ ಸ್ಪರ್ಧೆಗಳು ನಡೆಯಿತು. ಸುಮಾರು 180 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದರು

Kinnigoli-08041805 Kinnigoli-08041806

Kinnigoli-08041807

Comments

comments

Comments are closed.

Read previous post:
ಕಿನ್ನಿಗೋಳಿ ಬಿಜೆಪಿ ಪತ್ರಿಕಾ ಗೋಷ್ಠಿ

ಕಿನ್ನಿಗೋಳಿ : ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನ ಮನ್ನಣೆಯನ್ನು ಪಡೆಯುತ್ತಿದ್ದು ಅವರ ವಿರುದ್ದ ಪ್ರತಿಷ್ಠಿತ ದಿನ ಪತ್ರಿಕೆಯೊಂದರಲ್ಲಿ ಮಾನವ...

Close