ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತು ಜಾಗೃತಿ ಮಾಹಿತಿ

ಕಿನ್ನಿಗೋಳಿ: ದೇಶದಲ್ಲಿ ಯುವಜನತೆ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಕಾರಣ ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಪ್ರಾಣಹಾನಿ ತೀವ್ರಗತಿಯಲ್ಲಿ ಏರುತ್ತಿರುವುದು ಆತಂಕಕಾರಿ ವಿಷಯ ಎಂದು ಮೂಲ್ಕಿ ಪೋಲೀಸ್ ಠಾಣಾ ಪೋಲೀಸ್ ಉಪ ನಿರೀಕ್ಷಕ ಶೀತಲ್ ಅಲಗೂರು ಹೇಳಿದರು.
ಕಿನ್ನಿಗೋಳಿ ಸಮೀಪದ ತೋಕೂರು ತಪೋವನದಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಮುಲ್ಕಿ ರಾಮಕೃಷ್ಟ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಹಾಗೂ ರೋವರ‍್ಸ್ ಘಟಕ, ಶ್ರೀ ಗಣೇಶೊತ್ಸವ ಸಮಿತಿ, ಪಕ್ಷಿಕೆರೆ ಮತ್ತು ವಿನಾಯಕ ಮಿತ್ರ ಮಂಡಳಿ, ಪಕ್ಷಿಕೆರೆ, ಇವರು ಜಂಟಿಯಾಗಿ ಆಯೋಜಿಸಿರುವ ರಸ್ತೆ ಸುರಕ್ಷತಾ ಮತ್ತು ಮಾದಕ ವಸ್ತು ಜಾಗೃತಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವಜನತೆ ಹೆಚ್ಚು ಹೆಚ್ಚು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಹಿನ್ನೆಡೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಜಾಗೃತಿ ಮಾಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಿ ಯುವಜನತೆಗೆ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುವ ಜವಾಜ್ದಾರಿಯನ್ನು ವಹಿಸಬೇಕಾಗಿದೆ ಎಂದರು.
ಸಮಾಜ ಸೇವಕ ನಿತಿನ್ ವಾಸ್ ಮಾತನಾಡಿ ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅದಕ್ಕೆ ಬಲಿಯಾಗದಂತೆ ಎಚ್ಚರಿಸಿದರು.
ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್, ಸಂಸ್ಥೆಯ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್ ಹಾಗೂ ರೋವರ‍್ಸ್ ಲೀಡರ್ ಸುರೇಶ್ ಎಸ್. ಉಪಸ್ಥಿತರಿದ್ದರು.
ಪಕ್ಷಿಕೆರೆ ಶ್ರೀ ಗಣೇಶೊತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಪಿ. ಶೆಟ್ಟಿಗಾರ್ ಪ್ರಸ್ತಾವನೆಗೈದರು. ಶರಣ್ ಆಚಾರ್ಯ ಪ್ರಾರ್ಥಿಸಿದರು. ಸಂಸ್ಥೆಯ ಪ್ರಿನ್ಸಿಪಾಲ್ ವೈ. ಎನ್. ಸಾಲಿಯಾನ್ ಸ್ವಾಗತಿಸಿದರು. ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿ ಹರಿ ಹೆಚ್. ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ವಿಲ್ಪ್ರೆಡ್ ಜಾನ್ ಮಾಥಯಾಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08041803

 

Comments

comments

Comments are closed.

Read previous post:
Kinnigoli-08041802
ಮೆನ್ನಬೆಟ್ಟು ಹಾ.ಉ. ಮಹಿಳಾ ಸ.ಸಂಘದ ವಾರ್ಷಿಕ ಸಭೆ

ಕಿನ್ನಿಗೋಳಿ : ಕ್ಯಾಪ್ಶನ್ : ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ೨೦೧೭-೨೦೧೮ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಈ...

Close