ಯಕ್ಷ ಲಹರಿ ತಾಳಮದ್ದಲೆ 2018

ಕಿನ್ನಿಗೋಳಿ: ಧಾರ್ಮಿಕ ಚಿಂತನೆ ಸಂಸ್ಕಾರ ಸಂಸ್ಕ್ರತಿಯ ಪುರಾಣ ಕಥೆಗಳನ್ನು ಯಕ್ಷಗಾನ ತಾಳಮದ್ದಲೆ ಮೂಲಕ ಪಸರಿಸಿದಾಗ ಸುಶಿಕ್ಷಿತ ಸಮಾಜ ನಿಮಾರ್ಣ ಸಾಧ್ಯ ಎಂದು ಕಟೀಲು ದೇವಳ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ, ಯುಗಪುರುಷ ಸಂಯೋಜನೆಯಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಯಕ್ಷಲಹರಿ ತಾಳಮದ್ದಲೆ ಸಪ್ತಾಹ 2018 ಮೋಕ್ಷ ಸಂಗ್ರಾಮ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಯಕ್ಷಲಹರಿಯ ಸ್ಥಾಪಕಾಧ್ಯಕ್ಷ ದಿ. ಇ. ಶ್ರೀನಿವಾಸ ಭಟ್ ಅವರ ಸಂಸ್ಮರಣ ಭಾಷಣಗೈದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿ ಪ್ರಬಂಧಕ ವೈ.ವಿ ಬಾಲಚಂದ್ರ ಮಾತನಾಡಿ ಗದ್ಯ ಪದ್ಯ ದೃಶ್ಯ ಕಲಾ ಪ್ರಾಕಾರಗಳ ಸಂಯೋಜನೆಯಲ್ಲಿ ತಾಳಮದ್ದಲೆ ಅಗ್ರಸ್ಥಾನಿಯಾಗಿದೆ. ಸಂಸ್ಕೃತಿ ಮತ್ತು ಪುರಾಣ ಜ್ಞಾನವನ್ನು ಹೆಚ್ಚಿಸುವ ಅಚ್ಚ ಕನ್ನಡದ ಯಕ್ಷಗಾನ ತಾಳಮದ್ದಲೆಯನ್ನು ಮೂಲ ಸ್ವರೂಪದಲ್ಲೇ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದರು..
ಈ ಸಂದರ್ಭ ಕಲಾ ಸಂಘಟಕ ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಹಾಗೂ ಯಕ್ಷಗಾನ ಕಲಾವಿದ ವಿಠಲ ಶೆಟ್ಟಿ ಪುನರೂರು ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಅನಂತಕೃಷ್ಣ ಭಟ್, ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ, ಕಿನ್ನಿಗೋಳಿ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ವಿಶ್ವನಾಥ ಕಾಮತ್, ಕಿನ್ನಿಗೋಳಿ ಕಾರ್ಪೋರೇಶನ್ ಬ್ಯಾಂಕ್ ಶಾಖಾ ಪ್ರಬಂಧಕ ಪ್ರವೀಣ್ ಉಳ್ಳಾಲ, ಕಿನ್ನಿಗೋಳಿ ವಿಜಯಾ ಬ್ಯಾಂಕ್ ಪ್ರಬಂಧಕ ಮೋಹನ್, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಶ್ರೀವತ್ಸ ಹಾಗೂ ಸುಧಾಕರ ಕುಲಾಲ್ ಸನ್ಮಾನ ಪತ್ರ ವಾಚಿಸಿದರು. ಯಕ್ಷಲಹರಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು. ಯಕ್ಷಲಹರಿ ಕಾರ್ಯದರ್ಶಿ ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigoli-06081801

Comments

comments

Comments are closed.

Read previous post:
Kinnigoli-08041809
ಕಟೀಲು : ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಕಿನ್ನಿಗೋಳಿ : ವಿಜ್ಞಾನಿಗಳು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಆಶಯ ಕನಸು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಇತ್ತು ಅದು ಇದೀಗ ಅಟಲ್ ಟಿಂಕರಿಂಗ್...

Close