ಯುಬಿಎಂಸಿ ಶಾಲಾ ಶೌಚಾಲಯಕ್ಕೆ ದುರಸ್ಥಿ ಭಾಗ್ಯ

ಕಿನ್ನಿಗೋಳಿ: ಮಕ್ಕಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಗಮನ ಕೊಡಬೇಕು. ಸ್ಥಳೀಯ ಸಂಘ ಸಂಸ್ಥೆಗಳು ತಮ್ಮ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸರಕಾರಿ ಶಾಲೆಗೆ ನೆರವು ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು.
ಹಳೆಯಂಗಡಿಯ ಯುಬಿಎಂಸಿ ಶಾಲೆಯ ಶೌಚಾಲಯವನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನವೀಕರಣಗೊಳಿಸಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ರಜತ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಸೂರ್ಯಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂಗಳೂರಿನ ನೆಹರು ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತಾ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲದ ಜಂಟಿ ಸಂಯೋಜನೆಯಲ್ಲಿ ಸ್ವಚ್ಚ ಭಾರತ ಬೇಸಿಗೆ ತರಬೇತಿ ಕಾರ್ಯಕ್ರಮದಲ್ಲಿ ಈ ಕಾರ್ಯ ಮಾಡಲಾಯಿತು.
ತಾ. ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾ. ಪಂ. ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಪಡುಪಣಂಬೂರು ಸಹಕಾರಿ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಯುವಕ ಮಂಡಲದ ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಟ್ರಸ್ಟಿನ ಕಾರ್ಯದರ್ಶಿ ಸ್ಟ್ಯಾನಿ ಡಿ’ಕೋಸ್ತ, ಯುವಕ ಮಂಡಲದ ಕಾರ್ಯದರ್ಶಿ ನಾಗೇಶ್ ಟಿ. ಜಿ., ಕೋಶಾಕಾರಿ ಯತೀಶ್ ಕೋಟ್ಯಾನ್, ಟ್ರಸ್ಟಿಗಳಾದ ಎಸ್.ಎಚ್.ಶೆಟ್ಟಿಗಾರ್, ಎಚ್. ರಾಮಚಂದ್ರ ಶೆಣೈ, ಮೋಹನ್ ಬಂಗೇರ, ಮಹಾಬಲ ಅಂಚನ್, ಯೋಗೀಶ್ ಪಾವಂಜೆ, ಮನೋಜ್ ಕೆಲೆಸಿಬೆಟ್ಟು, ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತ ವಾಸುದೇವ್, ಸದಸ್ಯರಾದ ಸಾಜಿದ, ರೇಷ್ಮಾ, ರಾಜೇಶ್ವರಿ, ರೇಣುಕಾ ಸಂಜಯ್, ಸಾವಿತ್ರಿ ಗೋಪಾಲ್, ಪ್ರತಿಮ, ಮೋಹಿನಿ ಟೀಚರ್, ಪ್ರಮೀಳಾ ಪಾವಂಜೆ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಸುಧಾಕರ್ ಅಮೀನ್ ಸ್ವಾಗತಿಸಿದರು, ಶಾಲಾ ಮುಖ್ಯ ಶಿಕ್ಷಿಕಿ ಐರಿನ್ ಕ್ರಿಸ್ಟಬೆಲ್ ವಂದಿಸಿದರು.

Kinnigoli-07081801

Comments

comments

Comments are closed.

Read previous post:
Kinnigoli-08041809
ಕಟೀಲು : ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಕಿನ್ನಿಗೋಳಿ : ವಿಜ್ಞಾನಿಗಳು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಆಶಯ ಕನಸು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಇತ್ತು ಅದು ಇದೀಗ ಅಟಲ್ ಟಿಂಕರಿಂಗ್...

Close