ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಬೇಕು

ಕಿನ್ನಿಗೋಳಿ: ಮಹಿಳೆಯರು ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಸಮಾಜ ಸೇವಾ ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳಬೇಕು, ಸ್ವಸ್ಥ ಸಮಾಜದೊಂದಿಗೆ ತಾನು ಬೆಳೆದು ಇತರರನ್ನು ಬೆಳೆಯಲು ಕಾರಣರಾಗಬೇಕು. ಗ್ರಾಮ ಪಂಚಾಯಿತಿಗಳ ಮೂಲಕ ಈ ಕಾರ್ಯ ಸಾಧ್ಯ ಎಂದು ಕೊಲ್ಲೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಶೋಭಾ ರಾಣಿ ಹೇಳಿದರು.
ತೋಕೂರು ಎಸ್.ಕೋಡಿ ಕುಲಾಲ ಸಭಾಭವನದಲ್ಲಿ ನಡೆದ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಾಗರತ್ನ ಮಾತನಾಡಿ ಸ್ತ್ರೀ ಸಂವೇದನೆಯ ಹಿತವನ್ನು ರಕ್ಷಿಸಲು ಅಂಗನವಾಡಿ ಸಾಂತ್ವನ ಕೇಂದ್ರವಾಗಿದೆ. ಮಹಿಳೆಯರು ಮುಕ್ತವಾಗಿ ತಮ್ಮ ನೋವುಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರದ ಸಹಕಾರ ಪಡೆಯಬಹುದು ಎಂದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ಪಂ. ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಪುಷ್ಪಾವತಿ, ಸಂಪಾವತಿ, ಲೀಲಾ ಬಂಜನ್, ಮಂಜುಳಾ, ಪುಷ್ಪಾ ಯಾನೆ ಶ್ವೇತಾ, ವನಜಾ, ಹೇಮನಾಥ ಅಮೀನ್, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕಿಯರು, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಪರಿಕ್ಷಾರ್ಥಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli-07081803

Comments

comments

Comments are closed.

Read previous post:
Kinnigoli-07081802
ತ್ಯಾಜ್ಯ ಸಂಸ್ಕರಣೆ ವಿಧಾನ ಶಿಕ್ಷಣದಲ್ಲಿ ಆಳವಡಿಸಲಿ

ಕಿನ್ನಿಗೋಳಿ: ತ್ಯಾಜ್ಯ ಸಂಸ್ಕರಣೆ ವಿಧಾನವನ್ನು ಶಿಕ್ಷಣದಲ್ಲಿ ಆಳವಡಿಸಿಕೊಳ್ಳಬೇಕು.ಸಂಸ್ಥೆಯಲ್ಲಿ ಸಂಗ್ರಹಿತವಾಗುವ ತ್ಯಾಜ್ಯವನ್ನು ಆಯಾಯ ಸಂಸ್ಥೆಗಳಲ್ಲಿಯೇ ವಿದ್ಯಾರ್ಥಿಗಳು ಸಂಸ್ಕರಿಸಿ, ಶಾಲಾ ಕೈತೋಟಕ್ಕೆ ಬೇಕಾದ ಗೊಬ್ಬರವನ್ನು ತಯಾರಿಸುವುದರ ಜೊತೆಗೆ, ಪಂಚಾಯಿತಿಯ ತ್ಯಾಜ್ಯ ವಿಲೇವಾರಿಗೆ...

Close