ಪುನರೂರು : ಜೀಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಕಿನ್ನಿಗೋಳಿ ಸಮೀಪದ ಪುನರೂರು ಬಳಿ ನಡೆದಿದೆ.
ಕುಂದಾಪುರ ಮೂಲದ ಜೀಪ್ ಕಿನ್ನಿಗೋಳಿ ಮತ್ತು ಮೂಲ್ಕಿಯ ರಾಜ್ಯ ಹೆದ್ದಾರಿಯಲ್ಲಿ ಪುನರೂರು ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪ್‌ನಲ್ಲಿದ್ದ ಮಹಿಳೆಯೋರ್ವರಿಗೆ ಗಾಯವಾಗಿದೆ. ಅವರನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ನೆಲಕ್ಕುರುಳಿದ್ದು, ರಸ್ತೆ ಸಂಚಾರ ಎಸ್‌ಕೋಡಿಯಿಂದ ತೋಕೂರು ಮೂಲಕ ಹೆದ್ದಾರಿಯನ್ನು ತಲುಪಿ ಮೂಲ್ಕಿಯತ್ತ ಸಂಚರಿಸುತ್ತಿದ್ದರೆ. ಮೂಲ್ಕಿಯಿಂದ ಬಂದಂತಹ ವಾಹನಗಳು ಕೆ.ಎಸ್.ರಾವ್ ಮೂಲಕ ತೋಕೂರು ರಸ್ತೆಯಾಗಿ ಕಿನ್ನಿಗೊಳಿಯತ್ತ ಸಂಚರಿಸಿತ್ತು. ಮೆಸ್ಕಾಂ ಇಲಾಖೆಯು ತುಂಡಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದೆ.

Kinnigoli-07081804 Kinnigoli-07081805

Comments

comments

Comments are closed.

Read previous post:
Kinnigoli-07081803
ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಬೇಕು

ಕಿನ್ನಿಗೋಳಿ: ಮಹಿಳೆಯರು ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಸಮಾಜ ಸೇವಾ ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳಬೇಕು, ಸ್ವಸ್ಥ ಸಮಾಜದೊಂದಿಗೆ ತಾನು ಬೆಳೆದು ಇತರರನ್ನು ಬೆಳೆಯಲು ಕಾರಣರಾಗಬೇಕು. ಗ್ರಾಮ ಪಂಚಾಯಿತಿಗಳ ಮೂಲಕ ಈ ಕಾರ್ಯ...

Close