ತ್ಯಾಜ್ಯ ಸಂಸ್ಕರಣೆ ವಿಧಾನ ಶಿಕ್ಷಣದಲ್ಲಿ ಆಳವಡಿಸಲಿ

ಕಿನ್ನಿಗೋಳಿ: ತ್ಯಾಜ್ಯ ಸಂಸ್ಕರಣೆ ವಿಧಾನವನ್ನು ಶಿಕ್ಷಣದಲ್ಲಿ ಆಳವಡಿಸಿಕೊಳ್ಳಬೇಕು.ಸಂಸ್ಥೆಯಲ್ಲಿ ಸಂಗ್ರಹಿತವಾಗುವ ತ್ಯಾಜ್ಯವನ್ನು ಆಯಾಯ ಸಂಸ್ಥೆಗಳಲ್ಲಿಯೇ ವಿದ್ಯಾರ್ಥಿಗಳು ಸಂಸ್ಕರಿಸಿ, ಶಾಲಾ ಕೈತೋಟಕ್ಕೆ ಬೇಕಾದ ಗೊಬ್ಬರವನ್ನು ತಯಾರಿಸುವುದರ ಜೊತೆಗೆ, ಪಂಚಾಯಿತಿಯ ತ್ಯಾಜ್ಯ ವಿಲೇವಾರಿಗೆ ವಿನಿಯೋಗಿಸುವ ವೆಚ್ಚವನ್ನು ತಪ್ಪಿಸಬಹುದು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕನಾಥ ಭಂಡಾರಿ ಹೇಳಿದರು.
ತೋಕೂರು ತಪೋವನದ ಡಾ.ಎಂ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತ್ಯಾಜ್ಯ ಘಟಕದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಮಾತನಾಡಿ ಕಸದಿಂದ ರಸ ತೆಗೆಯುವಂತೆ ಸಾವಯವ ಗೊಬ್ಬರವನ್ನು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಹಾಗೂ ವಿದ್ಯಾ ಸಂಸ್ಥೆಗಳಲ್ಲೂ ತಯಾರಿಸಿ, ಶಾಲಾ ತೋಟವನ್ನು ಆ ಮೂಲಕ ಸುಂದರಗೊಳಿಸ ಬಹುದು ಎಂದು ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾ ಬಂಜನ್, ಪುಷ್ಪಾವತಿ, ಹೇಮನಾಥ್ ಅಮೀನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ರಾವ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾತ್ಯಕ್ಷಿಕೆಯಲ್ಲಿ ಬಳಸಲ್ಪಡುವ ಪೈಪ್ ಕಾಂಪೋಸ್ಟ್‌ನ ಸಾಮಗ್ರಿಗಳನ್ನು ಗ್ರಾಮ ಪಂಚಾಯಿತಿಯಿಂದ ಒದಗಿಸಲಾಯಿತು.

Kinnigoli-07081802

Comments

comments

Comments are closed.

Read previous post:
Kinnigoli-07081801
ಯುಬಿಎಂಸಿ ಶಾಲಾ ಶೌಚಾಲಯಕ್ಕೆ ದುರಸ್ಥಿ ಭಾಗ್ಯ

ಕಿನ್ನಿಗೋಳಿ: ಮಕ್ಕಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಗಮನ ಕೊಡಬೇಕು. ಸ್ಥಳೀಯ ಸಂಘ ಸಂಸ್ಥೆಗಳು ತಮ್ಮ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸರಕಾರಿ ಶಾಲೆಗೆ ನೆರವು ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು...

Close