ಅಂಗನವಾಡಿ ಗ್ರಾಮೀಣ ಭಾಗದ ಸಾಂತ್ವನ ಕೇಂದ್ರ

ಕಿನ್ನಿಗೋಳಿ: ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಪೋಷಕರು ಮುಕ್ತವಾಗಿ ನೆರವು ನೀಡಬೇಕು, ಗ್ರಾಮೀಣ ಭಾಗದ ಸಾಂತ್ವನ ಕೇಂದ್ರವಾಗಿ ಅಂಗನವಾಡಿಯನ್ನು ಗುರುತಿಸುವುದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚು ಅವಲಂಬಿತವಾಗಿದೆ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹೇಳಿದರು.
ಪಡುಪಣಂಬೂರು ಗ್ರಾಮದ ತೋಕೂರು ಅಂಗನವಾಡಿ ಕೇಂದ್ರದಲ್ಲಿ ಮಂಗಳೂರಿನ ನೆಹರು ಯುವ ಕೇಂದ್ರ ಹಾಗೂ ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ಮಹಾತ್ಮ ಗಾಂಧಿ ಸ್ವಚ್ಚತೆ ಹಾಗೂ ಶ್ರಮದಾನದ ಸ್ವಚ್ಚತಾ ಪಾಕ್ಷಿಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ಕ್ಲಬ್‌ನ ಸದಸ್ಯರು ಅಂಗನವಾಡಿ ಕೇಂದ್ರದ ಸುತ್ತಮುತ್ತ ಇದ್ದ ಕಳೆ ಗಿಡಗಳನ್ನು ತೆಗೆದರು. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ವಿಲೆವಾರಿ ಮಾಡಲಾಯಿತು. ಕೇಂದ್ರದ ಮೇಲ್ಛಾವಣಿಯಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಕುಡಿಯುವ ನೀರಿನ ಟಾಂಕಿಯನ್ನು ಸ್ವಚ್ಚಗೊಳಿಸಲಾಯಿತು.
ಪಡುಪಣಂಬೂರು ಪಂಚಾಯಿತಿ ಸದಸ್ಯ ಸಂತೋಷ್‌ಕುಮಾರ್, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಂತಿ, ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಲೋಹಿತ್ ದೇವಾಡಿಗ, ಸುರೇಶ್ ಶೆಟ್ಟಿ, ಸೋಮನಾಥ, ಶಂಕರ್ ಪೂಜಾರಿ, ಸೋಮನಾಥ ದೇವಾಡಿಗ, ಯೂನಸ್, ಪ್ರಕಾಶ್ ಆಚಾರ್ಯ, ದೀಪಕ್ ದೇವಾಡಿಗ, ಹರಿಪ್ರಸಾದ್, ಶಶಿಧರ ಆಚಾರ್ಯ, ಗಣೇಶ್ ಆಚಾರ್ಯ, ಗೌತಮ್ ಬೆಳ್ಚಡ, ವಿಶಾಲ್ ಕಿರೋಡಿಯನ್, ಸುಖಾನಂದ ಶೆಟ್ಟಿ, ಗಣೇಶ್ ದೇವಾಡಿಗ, ರಂಜಿತ್ ಶೆಟ್ಟಿ, ನೀರಜ್ ಕಿರೋಡಿಯನ್, ಜಗದೀಶ್ ಕೋಟ್ಯಾನ್, ಅರಾಝ್, ಮಹೇಶ್ ಬೆಳ್ಚಡ, ವೀಕ್ಷಿತ್ ದೇವಾಡಿಗ, ಮುಖೇಶ್ ಸುವರ್ಣ, ಸುಭಾಸ್ ಅಮೀನ್ ಪಾಲ್ಗೊಂಡಿದ್ದರು.

Kinnigoli-10081809

Comments

comments

Comments are closed.

Read previous post:
Kinnigoli-10081808
ಟೈಲರ್ ಎಸೋಸಿಯೇಶನ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಆಧುನಿಕ ಕಾಲದಲ್ಲಿ ಸಿದ್ಧ ಉಡುಪುಗಳ ಬಳಕೆ ಹೆಚ್ಚಾದ ಕಾರಣ ಸಾಮಾನ್ಯ ಟೈಲರ್‌ಗಳಿಗೆ ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಎಂದು ಕರ್ನಾಟಕ ರಾಜ್ಯ ಟೈಲರ‍್ಸ್ ಎಸೋಸಿಯೇಶನ್‌ನ ರಾಜ್ಯ ಸಮಿತಿಯ...

Close