ಟೈಲರ್ ಎಸೋಸಿಯೇಶನ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಆಧುನಿಕ ಕಾಲದಲ್ಲಿ ಸಿದ್ಧ ಉಡುಪುಗಳ ಬಳಕೆ ಹೆಚ್ಚಾದ ಕಾರಣ ಸಾಮಾನ್ಯ ಟೈಲರ್‌ಗಳಿಗೆ ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಎಂದು ಕರ್ನಾಟಕ ರಾಜ್ಯ ಟೈಲರ‍್ಸ್ ಎಸೋಸಿಯೇಶನ್‌ನ ರಾಜ್ಯ ಸಮಿತಿಯ ಅಧ್ಯಕ್ಷ ಕೆ. ಎಸ್. ಆನಂದ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕೆ. ಎಸ್. ಟಿ. ಎ ಕಿನ್ನಿಗೋಳಿ ವಲಯ ಸಮಿತಿಯ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ವಲಯ ಸಮಿತಿಯ ಅಧ್ಯಕ್ಷ ಹರೀಶ್ ಪದ್ಮಶಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯಿಂದ ನಾವು ಬದುಕು ಕಟ್ಟಿಕೊಳ್ಳಲು ಸಾಧ್ಯ. ಇದರಿಂದ ಯಾವುದೇ ಸಮಸ್ಯೆಗಳನ್ನು ನಿವಾರಿಸಬಹುದು ಎಂದರು.
ಈ ಸಂದರ್ಭ ಹಿರಿಯ ಟೈಲರ್ ಸಂಜೀವ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕುಮಾರ್, ಗೌರವಾಧ್ಯಕ್ಷ ಶಂಕರ್ ಬಿ. ಕೋಟ್ಯಾನ್, ಕೆ.ಎಸ್.ಟಿ.ಎ ಮೂಲ್ಕಿ ಮೂಡಬಿದಿರೆ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ರಾಜಾ ರಾಮ್ ಸ್ವಾಗತಿಸಿದರು. ಸರಿತಾ ವರದಿ ವಾಚಿಸಿದರು. ಸಾರಿಕಾ ವಿದ್ಯಾರ್ಥಿ ವೇತನದ ಬಗ್ಗೆ ವಿವರ ತಿಳಿಸಿದರು. ತುಳಸಿ ವಂದಿಸಿದರು. ಮೋಹನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10081808

Comments

comments

Comments are closed.

Read previous post:
Kinnigoli-10081807
ಕಿರೆಂ : ಉಚಿತ ಯೋಗ ಶಿಬಿರ

ಕಿನ್ನಿಗೋಳಿ : ದಾಮಸ್ಕಟ್ಟೆ ಕಿರೆಮ ರೆಮದಿ ಅಮ್ಮನವರ ಇಗರ್ಜಿ ಪಾಲನಾ ಮಂಡಳಿ, ಕೆಥೋಲಿಕ್ ಸಭಾ ಜ್ಯೋತಿ ಸ್ತ್ರೀ ಸಂಘಟನೆ ಹಾಗೂ ಐ.ಸಿ.ವೈ.ಎಮ್ ಕಿರೆಂ ಘಟಕದ ವತಿಯಿಂದ ಒಂದು ವಾರಗಳ...

Close