ಲಿಂಗಾಧಾರಿತ ತಾರತಮ್ಯ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ: ಮಹಿಳೆಯರು ಪ್ರಜ್ಞಾವಂತರಾಗಬೇಕು. ಮಹಿಳೆಯರಿಗೆ ಸೂಕ್ತ ಸಲಹೆ ಸವಲತ್ತುಗಳನ್ನು ನೀಡಿ ಸುಶಿಕ್ಷಿತರನ್ನಾಗಿಸಬೇಕು ಎಂದು ಪ್ರಜ್ಞಾ ಸಲಹಾ ಕೇಂದ್ರದ ವಿಲಿಯಂ ಸ್ಯಾಮುವೆಲ್ ಎಂದು ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಹೆಣ್ಣುಮಕ್ಕಳ ಮತ್ತು ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಯೋಜನೆ ಹಾಗೂ ಮಂಗಳೂರು ಕಂಕನಾಡಿ ಪ್ರಜ್ಞಾ ಸಲಹಾ ಕೇಂದ್ರದ ಸಂಯೋಜನೆಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಲಿಂಗಾಧಾರಿತ ತಾರತಮ್ಯ ಮತ್ತು ಹಿಂಸೆಯ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮಾಹಿತಿ ನೀಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪಿಡಿಒ ರಮ್ಯಾ ಹಾಗೂ ಮೆನ್ನಬೆಟ್ಟು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10081806

Comments

comments

Comments are closed.

Read previous post:
Kinnigoli-10081805
ಕಿನ್ನಿಗೋಳಿ : ತಾಲೂಕು ಮಟ್ಟದ ಕರಾಟೆ ಪಂದ್ಯಾಟ

ಕಿನ್ನಿಗೋಳಿ: ಮಕ್ಕಳ ಬೆಳವಣಿಗೆಗೆ ಪಠ್ಯ ಶಿಕ್ಷಣ ಮಾತ್ರ ಮುಖ್ಯವಾಗಿರದೆ ಪಾಠ್ಯೇತರ ಚಟುವಟಿಕೆಗಳು ಕೂಡಾ ಮುಖ್ಯ. ಹೆತ್ತವರು ತಮ್ಮ ಮಕ್ಕಳ ಮನೋಸ್ಥೆರ್ಯವನ್ನು ಹೆಚ್ಚಿಸುವಂತೆ ಮಾಡಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ...

Close