ಮೆನ್ನಬೆಟ್ಟು ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಕಿನ್ನಿಗೋಳಿ: ಸ್ತನ್ಯಪಾನ ಮಾಡಿಸುವುದು ಮಗು ಮತ್ತು ತಾಯಿ ಇಬ್ಬರ ಆರೋಗ್ಯ ದೃಷ್ಟಿಯಿಂದಲೂ ಬಹಳ ಒಳ್ಳೆಯದು ಎಂಬುದು ತಜ್ಞ ವೈದ್ಯರ ಅಭಿಮತ. ಒಬ್ಬ ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುವ ಶಕ್ತಿ, ಅದು ಚಿಕ್ಕಂದಿನಲ್ಲಿ ಸೇವಿಸಿದ ತಾಯಿ ಹಾಲಿಗಿದೆ.
ಎಂದು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ನೇತ್ರಾ ಹೇಳಿದರು ದ.ಕ.ಜಿ.ಪಂ. ತಾ.ಪಂ. ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತಿಯ ಸಹಭಾಗಿತ್ವದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯತಿ ಸಬಾಭವನದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮ್ಯ ಕೆ ಎಸ್ ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-100818011

Comments

comments

Comments are closed.

Read previous post:
Kinnigoli-100818010
ಸ್ವಚ್ಚ ಭಾರತ್ ಯೋಜನೆ, ಕ್ರಾಂತಿಕಾರಿ ಬದಲಾವಣೆ

ಕಿನ್ನಿಗೋಳಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಒಗ್ಗೂಡಿಸಿ ಸ್ವಯಂ ಪ್ರೇರಣೆಯಿಂದ ಸ್ವಚ್ಚ ಭಾರತದ ಕಲ್ಪನೆ ಮೂಡಿಸಿದ್ದಾರೆ. ಇದು ಯೋಜನೆಯಲ್ಲ ಕ್ರಾಂತಿಕಾರಕ ಬದಲಾವಣೆ, ಗ್ರಾಮ ಗ್ರಾಮದಲ್ಲಿ ಜಾಗೃತಿ ಮೂಡುತ್ತಿರುವುದು...

Close