ನಮ್ಮೂರ ಶಾಲೆಗೆ ನಮ್ಮ ಯುವಜನರು ಅಭಿಯಾನ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ನಮ್ಮೂರ ಶಾಲೆಗೆ ನಮ್ಮ ಯುವಜನರು ಎಂಬ ಅಭಿಯಾನ ಶ್ಲಾಘನೀಯ ಎಂದು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಹೇಳಿದರು.
ಮಂಗಳೂರು ನೆಹರು ಯುವ ಕೇಂದ, ಮಂಗಳೂರು ಅಮಲಾ ಭಾರತ್ ಬೋಳೂರು, ಯುಬಿಎಂಸಿ ಶಾಲೆಯ ಹಳೇ ವಿದ್ಯಾರ್ಥಿಗಳು, ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತಾ ಸೇವಾ ಟ್ರಸ್ಟ್ , ಯುವತಿ ಮತ್ತು ಮಹಿಳಾ ಮಂಡಲ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಜಂಟೀ ಆಶ್ರಯದಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳೆಯಂಗಡಿ ಸಿ.ಎಸ್.ಐ ಚರ್ಚ್‌ನ ಸಭಾಪಾಲಕ ರೆ. ವಿನಯ್‌ಲಾಲ್ ಬಂಗೇರ ಶುಭ ಹಾರೈಸಿದರು.
ಶಾಲೆಯ ಮೈದಾನ, ಶೌಚಾಲಯ, ಹೂತೋಟ, ಶಾಲಾ ಸಭಾಂಗಣದ ಸ್ವಚ್ಚತೆ, ಹುಲ್ಲು, ಗಿಡ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ಮೈದಾನವನ್ನು ಮಕ್ಕಳ ಉಪಯೋಗಕ್ಕಾಗಿ ಸಮತಟ್ಟು ಮಾಡಲಾಯಿತು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಯುಬಿಎಂಸಿ ಶಾಲಾ ಮುಖ್ಯ ಶಿಕ್ಷಕಿ ಐರಿನ್ ಕ್ರಿಸ್ಟಬೆಲ್, ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಅಮಲ ಭಾರತ್‌ನ ಮೋಹನ್ ಬಂಗೇರ, ಇಂದ್ರವದನ್, ಅಶೋಕ್, ಯಶವಂತಿ, ಅರುಣಾಕ್ಷಿ, ಅಂಕಿತ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಹಿಮಕರ್ ಕದಿಕೆ, ಯುವಕ ಮಂಡಲದ ಸ್ಟ್ಯಾನಿ ಡಿ’ಕೋಸ್ತ, ಚಂದ್ರಶೇಖರ್ ಜಿ, ಎಸ್. ಎಚ್. ಶೆಟ್ಟಿಗಾರ್, ಯೋಗೀಶ್ ಪಾವಂಜೆ, ಲೋಕೇಶ್ ಚಿಲಿಂಬಿ, ಎಚ್. ರಾಮಚಂದ್ರ ಶೆಣ್ಯೆ ಯುವತಿ ಮತ್ತು ಮಹಿಳಾಮಂಡಲದ ಸುಜಾತ ವಾಸುದೇವ್, ದಿವ್ಯಶ್ರೀ ಕೋಟ್ಯಾನ್, ಹಾಗೂ ಹಳೆ ವಿದ್ಯಾರ್ಥಿಗಳಾದ ಅದ್ದಿ ಬೊಳ್ಳೂರು, ಮಂಜುನಾಥ ಕುಡ್ವ, ಹಾಗೂ ಸಿ.ಎಸ್.ಐ ಚರ್ಚ್‌ನ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಮತ್ತಿತರರು ಭಾಗವಹಿಸಿದ್ದರು.
ಯುವಕ ಮಂಡಲದ ಅಧ್ಯಕ್ಷ ಸುಧಾಕರ್ ಅಮೀನ್ ಸ್ವಾಗತಿಸಿ, ನಿರೂಪಿಸಿದರು.

Kinnigoli-100818013

Comments

comments

Comments are closed.

Read previous post:
Kinnigoli-100818012
ಆರೋಗ್ಯಪೂರ್ಣ ಪರಿಸರ ನಿರ್ಮಾಣಕ್ಕೆ ಒಂದಾಗೋಣ

ಕಿನ್ನಿಗೋಳಿ: ಆರೋಗ್ಯಪೂರ್ಣ ಪರಿಸರ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಆಸಕ್ತಿ ವಹಿಸಿ ಸ್ವಚ್ಚತಾ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ತೋಕೂರು ಯುವಕ ಸಂಘದ ಅಧ್ಯಕ್ಷ ಹೇಮನಾಥ...

Close