ಆಟಿ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕ

ಕಿನ್ನಿಗೋಳಿ: ತುಳುನಾಡಿನ ಆಟಿ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಶಾಮಿಯಾನ ಸಂಯೋಜಕರ ಒಕ್ಕೂಟದ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಹೇಳಿದರು.
ಎಸ್. ಕೋಡಿ ಕಂಬಳಬೆಟ್ಟು ಶ್ರೀ ದೇವಿ ಮಹಿಳಾ ಮಂಡಲ ಸಭಾ ಭವನದಲ್ಲಿ ಶ್ರೀ ದೇವಿ ಮಹಿಳಾ ಮಂಡಲ ಕಂಬಳಬೆಟ್ಟು ತೋಕೂರು ಇದರ ಆಶ್ರಯದಲ್ಲಿ ಭಾನುವಾರ ನಡೆದ ಆಟಿಡ್ ತಿರ್ಲ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಪಿಡಿಒ ಅನಿತಾ ಕ್ಯಾಥರಿನ್ ಅಧ್ಯಕ್ಷತೆ ವಹಿಸಿದ್ದರು. ತೋಕೂರು ಯುವಕ ವೃಂದದ ಅಧ್ಯಕ್ಷ ಹೇಮನಾಥ ಅಮೀನ್, ಶ್ರೀದೇವಿ ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಉಪಸ್ಥಿತರಿದ್ದರು.
ಗೀತಾ ಕುಂದರ್ ಸ್ವಾಗತಿಸಿದರು. ವಿಮಲ ಬಂಗೇರ ವಂದಿಸಿದರು. ಶಶಿಕಲಾ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

 Kinnigoli-10081801

Comments

comments

Comments are closed.

Read previous post:
Kinnigoli-07081805
ಪುನರೂರು : ಜೀಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಕಿನ್ನಿಗೋಳಿ ಸಮೀಪದ ಪುನರೂರು ಬಳಿ ನಡೆದಿದೆ. ಕುಂದಾಪುರ ಮೂಲದ ಜೀಪ್...

Close