ಸ್ವಚ್ಚ ಭಾರತ್ ಯೋಜನೆ, ಕ್ರಾಂತಿಕಾರಿ ಬದಲಾವಣೆ

ಕಿನ್ನಿಗೋಳಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಒಗ್ಗೂಡಿಸಿ ಸ್ವಯಂ ಪ್ರೇರಣೆಯಿಂದ ಸ್ವಚ್ಚ ಭಾರತದ ಕಲ್ಪನೆ ಮೂಡಿಸಿದ್ದಾರೆ. ಇದು ಯೋಜನೆಯಲ್ಲ ಕ್ರಾಂತಿಕಾರಕ ಬದಲಾವಣೆ, ಗ್ರಾಮ ಗ್ರಾಮದಲ್ಲಿ ಜಾಗೃತಿ ಮೂಡುತ್ತಿರುವುದು ಶ್ಲಾಘನೀಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮಂಗಳೂರಿನ ನೆಹರು ಯುವ ಕೇಂದ್ರದ ಸಹಕಾರದಲ್ಲಿ, ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತಾಸೇವಾ ಟ್ರಸ್ಟ್ , ಯುವತಿ ಮತ್ತು ಮಹಿಳಾ ಮಂಡಲ, ಹಳೆಯಂಗಡಿ ಇಂದಿರಾನಗರದ ಸರಕಾರಿ ಪ್ರಥಮ ದರ್ಜೆ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಇತರ ಸಂಘಗಳ ಆಶ್ರಯದಲ್ಲಿ ಹಳೆಯಂಗಡಿ ಇಂದಿರಾನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಚ್ಚ ಭಾರತ ಕಿರುಚಿತ್ರ ಅಭಿಯಾನ ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಿನ್ಸಿಪಾಲ್ ಡಾ. ಪಿ.ಬಿ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೋಟ್ಟು, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಜೆಸಿಂತ ಡಿಸೋಜ, ಹಳೆಯಂಗಡಿ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು, ಹಳೆಯಂಗಡಿ ಗ್ರಾ. ಪಂ. ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಹಿಮಕರ್ ಕದಿಕೆ, ಯುವಕ ಮಂಡಲದ ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಅಂಚನ್, ಟ್ರಸ್ಟ್ ನ ಕಾರ್ಯದರ್ಶಿ ಸ್ಟ್ಯಾನಿ ಡಿ’ಕೋಸ್ತ, ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಲೋಚನಾ ಮಹಾಬಲ ಅಂಚನ್, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರೀ ಕೋಟ್ಯಾನ್, ಜಂಟಿ ಸಂಸ್ಥೆಗಳ ಪದಾಧಿಕಾರಿಗಳಾದ ಚಂದ್ರಶೇಖರ್ ಜಿ, ನಾಗೇಶ್ ಟಿ. ಜಿ, ಯತೀಶ್ ಕೋಟ್ಯಾನ್, ಎಚ್. ರಾಮಚಂದ್ರ ಶೆಣೈ, ಮಹಾಬಲ ಅಂಚನ್, ಲೋಕೇಶ್ ಚಿಲಿಂಬಿ, ಮನೋಜ್ ಇಂದಿರಾನಗರ, ರವಿಕಿರಣ್ ಇಂದಿರಾನಗರ, ಯೋಗೀಶ್ ಪಾವಂಜೆ, ಮೋಹನ್ ಬಂಗೇರ, ಹೇಮಾವತಿ, ಸಾವಿತ್ರೀ ಗೋಪಾಲ್, ರೇಣುಕಾ, ಯುವಕ ಮಂಡಲದ ಅಧ್ಯಕ್ಷ ಸುಧಾಕರ್ ಅಮೀನ್ ಹಾಗೂ ಕಾಲೇಜಿನ ಅಧ್ಯಾಪಕ ವೃಂದ, ರಾಷ್ಟೀಯ ಸೇವಾ ಯೋಜನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kinnigoli-100818010

Comments

comments

Comments are closed.

Read previous post:
Kinnigoli-10081809
ಅಂಗನವಾಡಿ ಗ್ರಾಮೀಣ ಭಾಗದ ಸಾಂತ್ವನ ಕೇಂದ್ರ

ಕಿನ್ನಿಗೋಳಿ: ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಪೋಷಕರು ಮುಕ್ತವಾಗಿ ನೆರವು ನೀಡಬೇಕು, ಗ್ರಾಮೀಣ ಭಾಗದ ಸಾಂತ್ವನ ಕೇಂದ್ರವಾಗಿ ಅಂಗನವಾಡಿಯನ್ನು ಗುರುತಿಸುವುದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚು ಅವಲಂಬಿತವಾಗಿದೆ ಎಂದು ಪಡುಪಣಂಬೂರು...

Close