ಕಾರ್ಯಕರ್ತರೇ ಪಕ್ಷದ ನೈಜ ಆಸ್ತಿ

ಕಿನ್ನಿಗೋಳಿ: ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಆಧಾರಿತ ಪಕ್ಷ. ಪ್ರತಿಯೊಂದು ಹಂತದಲ್ಲಿಯೇ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದರಿಂದ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಲು ಕಾರಣ. ವ್ಯಕ್ತಿಗಿಂತ ಪಕ್ಷ ಪ್ರಾಮುಖ್ಯ ಎಂದು ಅರಿತವ ನಿಜವಾದ ಕಾರ್ಯಕರ್ತ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ಕಲ್ಲಾಪು ವೀರಭದ್ರ ಮಹಮ್ಮಾಯಿ ದೇವಳದ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಆಧ್ಯಕ್ಷತೆ ವಹಿಸಿದ್ದರು..
ಈ ಸಂದರ್ಭ ಪಡುಪಣಂಬೂರು ಗ್ರಾಮ ಸಮಿತಿಯ ಪರವಾಗಿ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಶರತ್ ಕುಬೆವೂರು, ಜೀವನ್‌ಪ್ರಕಾಶ್ ಕಾಮೆರೊಟ್ಟು, ಕಿನ್ನಿಗೋಳಿ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಜಿಲ್ಲಾ ಸಮಿತಿಯ ಲೀಲಾ ಬಂಜನ್, ಕುಸುಮಾ ಚಂದ್ರಶೇಖರ್, ಯುವ ಮೋರ್ಚಾದ ಕ್ಷೇತ್ರ ಕಾರ್ಯದರ್ಶಿ ರಾಜೇಶ್ ದಾಸ್ ಪಕ್ಷಿಕೆರೆ, ರಾಜೇಶ್ ಕೆರೆಕಾಡು, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಯಾನಂದ ಮೂಲ್ಕಿ, ಎಸ್‌ಸಿ ಮೋರ್ಚಾದ ಅಧ್ಯಕ್ಷ ವಿಠಲ, ಕಲ್ಲಾಪು ದೇವಳದ ಅಧ್ಯಕ್ಷ ವೀರಪ್ಪ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಸ್ವಾಗತಿಸಿದರು, ಗ್ರಾಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ವಂದಿಸಿದರು, ಪಂಚಾಯಿತಿ ಸದಸ್ಯ ಹೇಮಂತ್ ಅಮೀನ್ ನಿರೂಪಿಸಿದರು.

Kinnigoli-11081804

 

Comments

comments

Comments are closed.

Read previous post:

ಕಿನ್ನಿಗೋಳಿ : ಆಟಿ ಕಷಾಯ ವಿತರಣೆ ವಿಕ ಸುದ್ದಿಲೋಕ ಕಿನ್ನಿಗೋಳಿ ವೈಜ್ಞಾನಿಕವಾಗಿ ಹಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವ...

Close