ಕಿನ್ನಿಗೋಳಿ : ಆಟಿ ಕಷಾಯ ವಿತರಣೆ

ಕಿನ್ನಿಗೋಳಿ: ವೈಜ್ಞಾನಿಕವಾಗಿ ಹಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವ ನಂಬಿಕೆ ತುಳುನಾಡಿನ ಎಲ್ಲಾ ವರ್ಗದ ಹಾಗೂ ಧರ್ಮದ ಜನರಲ್ಲಿದೆ. ಎಂದು ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ
ಕಿನ್ನಿಗೊಳಿ ಸಜ್ಜನ ಬಂಧುಗಳು ವತಿಯಿಂದ ಆಟಿ ಅಮಾವ್ಯಾಸೆ ಪ್ರಯುಕ್ತ ಶನಿವಾರ ಕಿನ್ನಿಗೋಳಿ ಬಸ್ ತಂಗುದಾನದಲ್ಲಿ ಉಚಿತವಾಗಿ ಹಾಲೆ ಮರದ ತೊಗಟೆಯ ಕಷಾಯ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಸಾರ್ವಜನಿಕರಿಗೆ ಕಷಾಯ ತಯಾರಿಸಿದ ಕೊಲ್ಲೂರು ಶ್ರೀಪಾದ ಭಟ್ ಕುಕ್ಕಟ್ಟೆ ಮತ್ತು ವಿನಯ್ ಭಟ್ ಅವರನ್ನು ಗೌರವಿಸಲಾಯಿತು.
ಸುಮಾರು 1000 ಜನರು ಕಷಾಯದ ಪ್ರಯೋಜನ ಪಡೆದುಕೊಂಡರು.
ಅಭಿಲಾಷ್ ಶೆಟ್ಟಿ ಕಟೀಲ್, ಸಚ್ಚಿದಾನಂದ ಭಟ್, ಉದ್ಯಮಿ ಪ್ರಥ್ವೀರಾಜ ಆಚಾರ್ಯ, ಸ್ಟಾನೀ ಡಿಸೋಜ, ಕಿನ್ನಿಗೋಳಿ ಪಂಚಾಯತ್ ಉಪಾಧ್ಯಕ್ಷೆ ಸುಜಾತ, ಲೋಕಯ್ಯ ಸಾಲಿಯಾನ್, ಪುರುಶೋತ್ತಮ ಶೆಟ್ಟಿ, ಕೆ.ಬಿ.ಸುರೇಶ್, ಲೀಲಾಧರ ಶೆಟ್ಟಿ, ಕೇಶವ ಕರ್ಕೇರ, ದೇವದಾಸ್ ಮಲ್ಯ, ಜನಾರ್ಧನ ಕಿಲೆಂಜೂರು, ಸಂತೋಷ ಶೆಟ್ಟಿ, ಮಿಥುನ್ ಉಡುಪ, ರಘನಾಥ ಕಾಮತ್, ದಾಮೋಧರ ಶೆಟ್ಟಿ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-11081808

 

Comments

comments

Comments are closed.

Read previous post:
Kinnigoli-11081801
ಕಿನ್ನಿಗೋಳಿ ಟ್ರಾಫಿಕ್ ಜಾಮ್ ಮಾರ್ಕೆಟ್ ಕಿರಿಕಿರಿ

ಕಿನ್ನಿಗೋಳಿ: ಸಂತೆ ದಿನವಾದ ಗುರುವಾರ ಕಿನ್ನಿಗೋಳಿ ಮಾರುಕಟ್ಟೆ ಹೊರಗಿನ ರಸ್ತೆಯಲ್ಲಿಯೇ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳನ್ನು ಸ್ಥಳಾಂತರಿಸಿದ ಟ್ರಾಫಿಕ್ ಪೋಲೀಸರನ್ನು ಮಾರುಕಟ್ಟೆ ಗುತ್ತಿಗೆ ವಹಿಸಿಕೊಂಡ ಇಮ್ರಾನ್ ತರಾಟೆಗೆ ತೆಗೆದುಕೊಂಡ ಘಟನೆ...

Close