ಕಿನ್ನಿಗೋಳಿ ಟ್ರಾಫಿಕ್ ಜಾಮ್ ಮಾರ್ಕೆಟ್ ಕಿರಿಕಿರಿ

ಕಿನ್ನಿಗೋಳಿ: ಸಂತೆ ದಿನವಾದ ಗುರುವಾರ ಕಿನ್ನಿಗೋಳಿ ಮಾರುಕಟ್ಟೆ ಹೊರಗಿನ ರಸ್ತೆಯಲ್ಲಿಯೇ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳನ್ನು ಸ್ಥಳಾಂತರಿಸಿದ ಟ್ರಾಫಿಕ್ ಪೋಲೀಸರನ್ನು ಮಾರುಕಟ್ಟೆ ಗುತ್ತಿಗೆ ವಹಿಸಿಕೊಂಡ ಇಮ್ರಾನ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಯಲ್ಲಿ ದಿನಾಲೂ ವಾಹನ ದಟ್ಟಣೆ ಇದ್ದರೂ ಪ್ರತೀ ಗುರುವಾರ ಸಂತೆ ದಿನ ಸ್ವಲ್ಪ ಜಾಸ್ತಿಯಾಗಿಯೇ ವಾಹನಗಳು ಸಂಚರಿಸುತ್ತಿದ್ದು ಪಾರ್ಕಿಂಗ್ ಸಮಸ್ಯೆಯೂ ತಲೆದೋರುತ್ತಿದೆ. ಸಂತೆಗೆ ಬೇರೆ ಬೇರೆ ಕಡೆಗಳಿಂದ ವ್ಯಾಪಾರಸ್ಥರು ತರಕಾರಿ ಮತ್ತಿತರ ಸಾಮಾನುಗಳ ವ್ಯಾಪಾರ ನಡೆಸುತ್ತಾರೆ. ಅವರು ತಮ್ಮ ವಾಹನಗಳನ್ನು ಕಿನ್ನಿಗೋಳಿ ಚರ್ಚ್ ಹತ್ತಿರ ಇರಿಸುವುದರಿಂದ ಟ್ರಾಫಿಕ್ ಕಿರಿಕಿರಿ ಕಡಿಮೆಯಿದ್ದು ಇದೀಗ ಕಿನ್ನಿಗೋಳಿ ರಸ್ತೆ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ರಾಮ ರೆಸ್ಟೋರೆಂಟ್ ಬಳಿ ಚರಂಡಿ ನಿರ್ಮಿಸಿದ ಪರಿಣಾಮ ವ್ಯಾಪಾರಸ್ಥರು ಮದರ್ ತೆರೇಸಾ ರಸ್ತೆಯಲ್ಲಿಯೇ ರಸ್ತೆಗೆ ಅಡ್ಡಲಾಗಿ ಕುಳಿತು ವ್ಯಾಪಾರ ನಡೆಸುತ್ತಿದ್ದರು ಸರಿಯಾದ ದಾರಿಯಿಲ್ಲದೆ ಗುರುವಾರ ಬೆಳಿಗ್ಗೆ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ರಸ್ತೆ ಬ್ಲಾಕ್ ಆದ ಬಗ್ಗೆ ಸಂಚಾರಿ ಪೂಲೀಸರಿಗೆ ತಿಳಿಸಿದ್ದು ಸಂಚಾರಿ ಪೋಲೀಸರು ಸ್ಥಳಕ್ಕೆ ತ್ವರಿತವಾಗಿ ಆಗಮಿಸಿ ರಸ್ತೆಯಲ್ಲಿನ ವ್ಯಾಪಾರ ತೆರವು ಮಾಡಲು ಮಾರುಕಟ್ಟೆ ಗುತ್ತಿಗೆದಾರ ಇಮ್ರಾನ್ ಅವರಿಗೆ ಕರೆ ಮಾಡಿ ವಿನಂತಿಸಿಕೊಂಡಿದ್ದರು. ಅವರ ಸ್ಪಂದನೆ ದೊರಕಿಲ್ಲ ಕಾರಣ ಪೋಲೀಸರು ರಸ್ತೆಯಲ್ಲಿದ್ದ ವ್ಯಾಪಾರಿಗಳನ್ನು ಸ್ಥಳಾಂತರಿಸಿ ಮುಖ್ಯ ರಸ್ತೆಯಿಂದ ಮದರ್ ತೆರೇಸಾ ರಸ್ತೆಗೆ ಸುಗಮವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಟ್ರಾಪಿಕ್ ಫೋಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಇಮ್ರಾನ್
ಮುಖ್ಯ ರಸ್ತೆ ಹಾಗೂ ಮದರ್ ತೆರೆಸಾ ರಸ್ತೆ ತೆರವು ಆದ ನಂತರ ಸ್ಥಳಕ್ಕಾಗಮಿಸಿದ ಗುತ್ತಿಗೆದಾರ ಇಮ್ರಾನ್ ವ್ಯಾಪಾರಸ್ಥರ ಸ್ಥಳಾಂತರಕ್ಕೆ ಆಕ್ಷೇಪವೆತ್ತಿ ಕರ್ತವ್ಯದಲ್ಲಿರುವ ಟ್ರಾಫಿಕ್ ಪೋಲೀಸರೊಂದಿಗೆ ತನ್ನದೇನು ತಪ್ಪಿಲ್ಲ ಎಂಬ ರೀತಿಯಲ್ಲಿ ಮಾತಿಗಿಳಿದು ಟ್ರಾಫಿಕ್ ಪೋಲೀಸರನ್ನೇ ದೂರಿ ಮಾತಿನ ಚಕಮಕಿ ನಡೆಸಿದರು.
ಪ್ರತೀ ಗುರುವಾರ ಕಿನ್ನಿಗೋಳಿ ಬ್ಲಾಕ್
ಸಂತೆ ದಿನ ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವ್ಯಾಪಾರದಿಂದ ಕಿನ್ನಿಗೋಳಿ ಪಂಚಾಯಿತಿ ಆಡಳಿತ ಸಂತೆಯ ವ್ಯಾಪಾರಸ್ಥರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ಈ ಸಮಸ್ಯೆ ಉಂಟಾಗುತ್ತಿದೆ. ಸಂತೆ ದಿನ ಮದರ್ ತೆರೇಸಾ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ಹಾಗೂ ಮೇಲ್ಭಾಗದಲ್ಲಿ ಬಿಸಿಲು ಮಳೆಗೆ ಪ್ಲಾಸ್ಟಿಕ್ , ಟರ್ಪಾಲ್ ಕಟ್ಟುತ್ತಿರುವುದರಿಂದ ಆಸುಪಾಸಿನ ಮನೆಗಳ ಜನರಿಗೆ ಸಂಚಾರಕ್ಕೆ ಕಷ್ಟ ಸಾಧ್ಯವಾಗಿದೆ. ಈ ಬಗ್ಗೆ ಗ್ರಾಮಸ್ಥರು ಪ್ರತೀ ಗ್ರಾಮ ಸಭೆಯಲ್ಲಿ ಆಕ್ಷೇಪವೆತ್ತಿದರೂ ಪಂಚಾಯಿತಿ ಆಡಳಿತ ಸೂಕ್ತ ಗಮನ ಕೊಡದಿರುವುದು ಹಾಗೂ ವ್ಯಾಪರಸ್ಥರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡದಿರುವುದು ವಿಷಾದನೀಯ. ಗುತ್ತಿಗೆದಾರರು ಕೂಡಾ ವ್ಯಾಪಾರಸ್ಥರ ಬಗ್ಗೆ ಗಮನ ನೀಡದೆ ಪೋಲೀಸರನ್ನು ದೂರುವುದು ತಪ್ಪು. ಗುತ್ತಿಗೆದಾರರರು ಹಾಗೂ ಪಂಚಾಯಿತಿ ಆಡಳಿತ ವ್ಯಾಪರಸ್ಥರ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಈ ಬಗ್ಗೆ ಪಂಚಾಯಿತಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಪ್ರತಿಭಟನೆಯ ಹಾದಿ ಹಿಡಿಯುವುದು ಖಂಡಿತ

ನಾವು ಹಲವು ಸಮಯದಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ, ಸಂಜೆಯಾದ ತಕ್ಷಣ ಗುತ್ತಿಗೆದಾರರು ವಸೂಲಿಗೆ ಬರುತ್ತಾರೆ ಆದರೆ ಇಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ, ಇದರಿಂದ ಜನರಿಗೆ ಮಾತ್ರವಲ್ಲದೆ ನಮಗೂ ತೊಂದರೆ ಆಗುತ್ತಿದೆ.

ವ್ಯಾಪಾರಸ್ಥರು, ಕಿನ್ನಿಗೋಳಿ

ರಸ್ತೆ ಅಗಲೀಕರಣ ಹಾಗೂ ಚರಂಡಿ ಕಾಮಗಾರಿಯಿಂದ ಸಮಸ್ಯೆ ಉಂಟಾಗಿದೆ, ಕಾಮಗಾರಿ ಮುಗಿದ ತಕ್ಷಣ ಈ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ. ಮತ್ತು ವ್ಯಾಪಾರಸ್ಥರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುತ್ತೇವೆ. ರಾಜ್ಯ ಹೆದ್ದಾರಿಯಿಂದಾಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಪಿಲೋಮಿನಾ ಸಿಕ್ವೇರ.
ಅಧ್ಯಕ್ಷರು
ಕಿನ್ನಿಗೋಳಿ ಗ್ರಾಮ ಪಂಚಾಯಿತಿ

Kinnigoli-11081801 Kinnigoli-11081802 Kinnigoli-11081803

Comments

comments

Comments are closed.

Read previous post:
Kinnigoli-100818015
ತೋಕೂರು : ಆಟಿದ ನೆಂಪು

ಕಿನ್ನಿಗೋಳಿ: ತುಳುನಾಡಿನ ಪ್ರತಿಯೊಂದು ಆಚರಣೆಗಳಿಗೂ ಸದುದ್ದೇಶವಿದೆ. ಕನಿಷ್ಠ ಸಂಘ ಸಂಸ್ಥೆಗಳು ಸಾಮೂಹಿಕವಾಗಿ ನಡೆಸಿ ಉಳಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಏಳಿಂಜೆ...

Close