ಸಾರ್ವತ್ರಿಕ ಕಾರ್ಯಕ್ಕೆ ನಾಗರಿಕರ ಸಹಕಾರ

ಕಿನ್ನಿಗೋಳಿ: ಸಾರ್ವತ್ರಿಕವಾಗಿ ನಡೆಸುವ ಸಮಾಜ ಸೇವಾ ಕಾರ್ಯಕ್ಕೆ ನಾಗರಿಕರ ಸಹಕಾರ ಸಿಕ್ಕಲ್ಲಿ ಯಶಸ್ಸು ಸಾಧ್ಯ ಹಾಗಾದಾಗ ಸಂಘಟನಾ ಶಕ್ತಿಯು ಸಹ ಬಲಗೊಳ್ಳುತ್ತದೆ ಎಂದು ಹಳೆಯಂಗಡಿ ಪಡುಪಣಂಬೂರು ವ್ಯವಸಾಯ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಹೇಳಿದರು.
ಹಳೆಯಂಗಡಿ ಇಂದಿರಾನಗರದ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಹಳೆಯಂಗಡಿ ಪಿಸಿಎ ಬ್ಯಾಂಕ್, ಶ್ರಿ ವಿದ್ಯಾವಿನಾಯಕ ಯುವಕ ಮಂಡಲ, ಮಹಿಳಾ ಮತ್ತು ಯುವತಿ ಮಂಡಲ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಿಂದೂ ಜಾಗರಣ ವೇದಿಕೆ, ಹಳೆಯಂಗಡಿ ಲಯನ್ಸ್ ಕ್ಲಬ್, ಸನಾತನ ಸಂಸ್ಥೆ, ಪಾವಂಜೆ ಓಂ ಕ್ರಿಕೇಟರ‍್ಸ್, ಸರ್ವಶಕ್ತಿ ವ್ಯಾಯಾಮ ಶಾಲೆ ಪಾವಂಜೆ ಮತ್ತಿತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ವನಸಂಕರಕ್ಷಣೆ ಮತ್ತು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ತಾ.ಪಂ. ಸದಸ್ಯ ಹಾಗೂ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಅಧ್ಯಕ್ಷ ಜೀವನ್ ಪ್ರಕಾಶ್ ಕಾಮೆರಟ್ಟು ಮಾತನಾಡಿ ರುದ್ರಭೂಮಿಯ ಅಭಿವೃದ್ಧಿಯಲ್ಲಿ ಸ್ಥಳೀಯ ಎಲ್ಲಾ ಸಂಸ್ಥೆಗಳು ಮುಕ್ತವಾಗಿ ನೆರವು ನೀಡುತ್ತಿದೆ. ಇಲ್ಲಿ ಸರ್ವ ವಿಧದಲ್ಲೂ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಸುಖೇಶ್ ಪಾವಂಜೆ, ಪಿಸಿಎ ಬ್ಯಾಂಕ್‌ನ ಶಂಕರ್ ಚಿಲಿಂಬಿ, ಪುರುಷೋತ್ತಮ, ಸರ್ವ ಶಕ್ತಿ ವ್ಯಾಯಾಮ ಶಾಲೆ ನಾರಾಯಣ, ಅಶೋಕ್, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಯಶೋಧರ ಸಾಲ್ಯಾನ್, ಮಾಜಿ ಅಧ್ಯಕ್ಷ ವಾಸು ನಾಯಕ್, ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಜಯಶೀಲ ಕೋಟ್ಯಾನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ವಾಸುದೇವ, ಪ್ರಮೀಳಾ, ಸುಲೋಚನ ಮಹಾಬಲ ಅಂಚನ್, ವಿವಿಧ ಸಂಘಟನೆಯ ವಿಶ್ವ ಇಂದಿರಾನಗರ, ಜೀವನ್, ಸುನಿಲ್, ಅವಿನಾಶ್, ಯುವಕ ಮಂಡಲದ ಎಚ್.ಎಸ್. ಶೆಟ್ಟಿಗಾರ್, ಮನೋಜ್‌ಕುಮಾರ್ ಕೆಲಸಿಬೆಟ್ಟು, ನಾಗರಾಜ್, ತುಕರಾಂ ಹಳೆಯಂಗಡಿ, ಸಂದೀಪ್ ಕೋಟ್ಯಾನ್, ಕಿರಣ್ ಚಕ್ಕಲಡಿ ಉಪಸ್ಥಿತರಿದ್ದರು.

Kinnigoli-11081807

Comments

comments

Comments are closed.

Read previous post:
Kinnigoli-11081806
ತಾಯಿಯ ಎದೆಹಾಲಿಗೆ ಪರ್ಯಾಯ ಮತ್ತೊಂದಿಲ್ಲ

ಕಿನ್ನಿಗೋಳಿ: ತಾಯಿಯ ಎದೆಹಾಲು ಪೌಷ್ಠಿಕ ಆಹಾರವನ್ನು ಗರಿಷ್ಠ ಪ್ರಮಾಣದಲ್ಲಿ ಹೊಂದಿರುವುದರಿಂದ ಇದಕ್ಕೆ ಪರ್ಯಾಯ ಮತ್ತೊಂದಿಲ್ಲ. ಎದೆಹಾಲು ಮಗುವಿನ ಸಮತೋಲಿನ ಬೆಳವಣಿಗೆಗೆ ಅಗತ್ಯ ಎಂದು ಬಳ್ಕುಂಜೆ ಕೊಲ್ಲೂರು ಸರಕಾರಿ ಆಯುರ್ವೇದ...

Close