ತಾಯಿಯ ಎದೆಹಾಲಿಗೆ ಪರ್ಯಾಯ ಮತ್ತೊಂದಿಲ್ಲ

ಕಿನ್ನಿಗೋಳಿ: ತಾಯಿಯ ಎದೆಹಾಲು ಪೌಷ್ಠಿಕ ಆಹಾರವನ್ನು ಗರಿಷ್ಠ ಪ್ರಮಾಣದಲ್ಲಿ ಹೊಂದಿರುವುದರಿಂದ ಇದಕ್ಕೆ ಪರ್ಯಾಯ ಮತ್ತೊಂದಿಲ್ಲ. ಎದೆಹಾಲು ಮಗುವಿನ ಸಮತೋಲಿನ ಬೆಳವಣಿಗೆಗೆ ಅಗತ್ಯ ಎಂದು ಬಳ್ಕುಂಜೆ ಕೊಲ್ಲೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಶೋಭಾ ರಾಣಿ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ, ಮಂಗಳೂರು ಆಯುಷ್ ಇಲಾಖೆ, ಬಳ್ಕುಂಜೆ ಕೊಲ್ಲೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಸಂಯುಕ್ತ ಆಶ್ರಯದಲ್ಲಿ ತೋಕೂರು ಯುವಕ ಸಂಘದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿ ಗಿಡಕ್ಕೆ ನೀರು ಸುರಿದು ಕಾರ್ಯಕ್ರಮ ಉದ್ಘಾಟಿಸಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕರುಣಾಕರ್ ಬೆಳ್ಳಾಯರು, ಸದಸ್ಯರಾದ ಮಂಜುಳಾ, ವನಜಾ, ಸಂಪಾವತಿ, ಪುಷ್ಪಾವತಿ, ಲೀಲಾ ಬಂಜನ್, ಪಿಡಿಒ ಅನಿತಾ ಕ್ಯಾಥರಿನ್, ಸಿಬ್ಬಂದಿ ಶರ್ಮಿಳಾ ಹಿಮಕರ್, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂ. ಕಾರ್ಯದರ್ಶಿ ಲೋಕನಾಥ ಭಂಡಾರಿ ಸ್ವಾಗತಿಸಿದರು, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ವಂದಿಸಿದರು, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Kinnigoli-11081806

Comments

comments

Comments are closed.

Read previous post:
Kinnigoli-11081805
ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಅದ್ಯತೆ

ಕಿನ್ನಿಗೋಳಿ: ಕಾಲೇಜು ಶಿಕ್ಷಣ ಪ್ರತಿಯೊಬ್ಬನ ಭವಿಷ್ಯ ಜೀವನವನ್ನು ತಿಳಿಹೇಳುವ ಹಂತವಾಗಿದ್ದು, ವಿದ್ಯಾರ್ಥಿಗಳ ಕ್ರೀಯಾಶೀಲತೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿ ಎಂದು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ...

Close