ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಅದ್ಯತೆ

ಕಿನ್ನಿಗೋಳಿ: ಕಾಲೇಜು ಶಿಕ್ಷಣ ಪ್ರತಿಯೊಬ್ಬನ ಭವಿಷ್ಯ ಜೀವನವನ್ನು ತಿಳಿಹೇಳುವ ಹಂತವಾಗಿದ್ದು, ವಿದ್ಯಾರ್ಥಿಗಳ ಕ್ರೀಯಾಶೀಲತೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿ ಎಂದು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ಪಿ.ಬಿ. ಪ್ರಸನ್ನ ಹೇಳಿದರು.
ಹಳೆಯಂಗಡಿ ಇಂದಿರಾನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಡಿ.ಎಂ.ಕಾಲೇಜಿನ ವಿದ್ಯಾರ್ಥಿಗಳಿಂದ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಸ್ಪರ್ಧೆಗಳ ಪೂರ್ವ ತಯಾರಿಯಲ್ಲಿನ ಹಣಕಾಸು ಸ್ಪರ್ಧೆ, ಮಾನವ ಸಂಪನ್ಮೂಲ ಸ್ಪರ್ಧೆ, ಬಿಝ್ ಕ್ವಿಝ್, ಒತ್ತಡ ನಿರ್ವಹಣೆ ಸ್ಪರ್ಧೆ ಮುಂತಾದ ವಿಷಯದ ಬಗ್ಗೆ ವಿವರಣೆ ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಡಕ್ಟ್ ಲಾಂಚ್ ಬಗ್ಗೆ ಸ್ಪರ್ಧೆ ನಡೆಸಲಾಯಿತು.
ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘ (ವಾನಿಸಂ) ಮತ್ತು ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗವು ಸಹಕರಿಸಿತ್ತು. ಎಸ್.ಡಿ.ಎಂ ವ್ಯವಹಾರ ಅಧ್ಯಯನ ಕಾಲೇಜಿನ ವಿದ್ಯಾರ್ಥಿಗಳಾದ ಅಮರ್, ನೆಲ್ಸನ್, ಅನೀಶ್, ವಫಾ, ಅಭಿಷೇಕ್, ಜೀವನ್ ಅವರು ಭಾಗವಹಿಸಿದ್ದರು.
ಕಾರ್ಯಕ್ರಮ ಸಂಯೋಜಕರಾದ ವಾಣಿಜ್ಯ ಸಂಘದ ಸಂಚಾಲಕಿ ಪ್ರೊ. ಮಾಲತಿ. ಕೆ ಸ್ವಾಗತಿಸಿದರು. ನಿರ್ವಹಣಾ ಸಂಘದ ಪ್ರೊ. ಪ್ರಸನ್ನ ಕುಮಾರ್ ವಂದಿಸಿದರು. ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಪಿಂಟೊ ನಿರೂಪಿಸಿದರು.

Kinnigoli-11081805

Comments

comments

Comments are closed.

Read previous post:
Kinnigoli-11081804
ಕಾರ್ಯಕರ್ತರೇ ಪಕ್ಷದ ನೈಜ ಆಸ್ತಿ

ಕಿನ್ನಿಗೋಳಿ: ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಆಧಾರಿತ ಪಕ್ಷ. ಪ್ರತಿಯೊಂದು ಹಂತದಲ್ಲಿಯೇ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದರಿಂದ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಲು ಕಾರಣ. ವ್ಯಕ್ತಿಗಿಂತ ಪಕ್ಷ...

Close