ನಿಯೋಜಿತ ಮಂಗಳೂರು ಬಿಷಪ್ ಹುಟ್ಟೂರ ಸನ್ಮಾನ

ಕಿನ್ನಿಗೋಳಿ: ನಾವೆಲ್ಲ ದೇವರ ಮಕ್ಕಳು. ಎಲ್ಲಾ ಜಾತಿ ಧರ್ಮದವರು ಶಾಂತಿ ಸ್ನೇಹ ಸೌಹಾರ್ದತೆಯ ಜೀವನ ಪಾಲಿಸಿದಾಗ ಸುಶಿಕ್ಷಿತ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ನಿಯೋಜಿತ ಮಂಗಳೂರು ಬಿಷಪ್ ರೆ.ಫಾ. ಡಾ. ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ಭಾನುವಾರ ದಾಮಸ್ಕಟ್ಟೆ ಕಿರೆಂ ಚರ್ಚ್ ವ್ಯಾಪ್ತಿಯ ಸೈಂಟ್ ಲೋರೆನ್ಸ್ ವಾಡೊ ಹಬ್ಬದ ಕಾರ್ಯಕ್ರಮ ಹಾಗೂ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಸೈಂಟ್ ಲೋರೆನ್ಸ್ ವಾಡೊ ಹಾಗು ನೆಲ್ಲಿಗುಡ್ಡೆ ಗೆಳೆಯರ ಬಳಗದಿಂದ ಬಿಷಪ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಿರೆಂ ಚರ್ಚ್ ಧರ್ಮಗುರು ರೆ.ಫಾ. ವಿಕ್ಟರ್ ಡಿಮೆಲ್ಲೊ, ಸಹಾಯಕ ಧರ್ಮ ಗುರು ಫಾ. ಅವಿನಾಶ್, ಎಸ್.ವಿ.ಡಿ. ನಿರ್ದೇಶಕ ರೆ.ಫಾ. ಮರ್ವಿನ್, ಲೋರೆನ್ಸ್ ವಾಡೊ ಸಂಚಾಲಕಿ ಐರಿನ್ ರೆಬೆಲ್ಲೊ, ಜಯಪ್ರಕಾಶ್ ಲೋಬೋ, ಕಾನ್ವೆಂಟ್ ಸುಪೀರಿಯರ್ ಭಗಿನಿ ಕ್ರಿಸ್ಟೆಲ್ಲಾ, ಕಿರೆಂ ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಅನಿತಾ ಸಲ್ಡಾನ, ಕೇಂದ್ರ ಸಮಿತಿ ಸದಸ್ಯೆ ಪ್ರೀತಿ ಮಥಾಯಸ್ ಮತ್ತಿತರರು ಉಪಸ್ಥಿತರಿದ್ದರು.
ಎವ್ಜಿನ್ ಸಲ್ಡಾನ ಸ್ವಾಗತಿಸಿದರು. ಈಡೆಲ್ ಸಲ್ಡಾನ ಕಾರ್ಯಕ್ರಮ ನಿರೂಪಿಸಿದರು.

Mangalore-14081805 Mangalore-14081806 Mangalore-14081807

Comments

comments

Comments are closed.

Read previous post:
Mangalore-14081804
ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ಮೂಡಬೇಕು

ಮಂಗಳೂರು: ಕರ್ನಾಟಕ ಬ್ಯಾರಿ ಸದ್ಬಾವನಾ ವೇದಿಕೆ ಉಳ್ಳಾಲ ,ಮಂಗಳೂರು ವತಿಯಿಂದ ಕರುನಾಡ ಮಾಣಿಕ್ಯ ಪ್ರಶಸ್ತಿ ಪುರಸ್ಕೃತರಾದ ಕನಾಟಕ ಸರಕಾರದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರಿಗೆ...

Close