ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ಮೂಡಬೇಕು

ಮಂಗಳೂರು: ಕರ್ನಾಟಕ ಬ್ಯಾರಿ ಸದ್ಬಾವನಾ ವೇದಿಕೆ ಉಳ್ಳಾಲ ,ಮಂಗಳೂರು ವತಿಯಿಂದ ಕರುನಾಡ ಮಾಣಿಕ್ಯ ಪ್ರಶಸ್ತಿ ಪುರಸ್ಕೃತರಾದ ಕನಾಟಕ ಸರಕಾರದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನಾ ಸಮಾರಂಭ ಮತ್ತು ನಿವೃತ ಶಿಕ್ಷಕಿಯರಿಗೆ ಗೌರವಾರ್ಪಣೆ ಮತ್ತುಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮಕ್ಕೆ ಸಕ್ಲೇಶಪುರ ಪುರಸಭೆಯ ಮಾಜಿ ಅಧ್ಯಕ್ಷ ಇಬ್ರಾಹಿಮ್ ಯಾದ್ಗಾರ್ ಚಾಲನೆ ನೀಡಿದರು.
ಕರುನಾಡ ಮಾಣಿಕ್ಯ ಪ್ರಶಸ್ತಿ ಪುರಸ್ಕೃತರಾದ ಕನಾಟಕ ಸರಕಾರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರು ನಾವು ಯಾವುದೇ ಹುದ್ದೆಯಲ್ಲಿದ್ದರೂ ಜನರನ್ನು ಪ್ರೀತಿ ವಿಶ್ವಾಸ,ತಾಳ್ಮೆ ಸಹೋದರತೆಯಿಂದ ಪ್ರೀತಿಸುತ್ತಾ ಹೋದರೆ ನಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲು ಆಗಲ್ಲ, ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ಮೂಡಬೇಕು ಕರ್ನಾಟಕ ಬ್ಯಾರಿ ಸದ್ಬಾವನಾ ವೇದಿಕೆ ಉಳ್ಳಾಲ, ಮಂಗಳೂರು ಇದರ ಕಾರ್ಯವು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ನಿವೃತ ಶಿಕ್ಷಕಿಯರಾದ ರತ್ನಾವತಿ ಜೆ. ಬೈಕಾಡಿ, ಶಹನಾಝ್ ಬಾನು, ಲೀಲಾವತಿ.ಎಮ್, ಟಿಕೆ.ಸರೋಜ ಕುಮಾರಿ, ಲೆನ್ನಿ ಸವರಿನ್ ಡಿಸೋಜ, ನುಝಹತ್ತುನ್ನೀಸ ಅವರನ್ನು ಗೌರವಿಸಲಾಯಿತು.
ದ.ಕ.ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅನುಪಮಾ ಮಾಸ ಪತ್ರಿಕೆಯ ಉಪ ಸಂಪಾದಕಿ ಸಬೀಹಾ ಫಾತಿಮ, ಉಳ್ಳಾಲ ಅಬ್ಬಕ್ಕ ಬಸದಿ ಪ್ರಧಾನ ಕಾರ್ಯದರ್ಶಿ ಪುಸ್ಪರಾಜ್ ಜೈನ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಆಯಿಷಾ ಯು.ಕೆ, ಅಮೃತ ಪ್ರಕಾಶನ ಮಾಸ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಮಂಗಳೂರು ಅಭಿಷ್ ಬಿಲ್ಡರ‍್ಸ್ ಮತ್ತು ಡೆವಲಪರ‍್ಸ್ ನಿರ್ದೇಶಕಿ ಕವಿತಾ ಜೈನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ದೇವಕಿ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಕರ್ನಾಟಕ ಬ್ಯಾರಿ ಸದ್ಬಾವನಾ ವೇದಿಕೆಯ ಸಂಚಾಲಕ ಯು.ಕೆ.ಯೂಸುಫ್, ಇಸ್ಮಾಯಿಲ್ ಪೊಡಿಮೋನು, ಯು.ಕೆ.ಅಬ್ಬಾಸ್ ಕೋಟೆಪುರ, ಯು.ಕೆ.ನಝೀರ್ ಉಪಸ್ಥಿತರಿದ್ದರು.
ಕರ್ನಾಟಕ ಬ್ಯಾರಿ ಸದ್ಬಾವನಾ ವೇದಿಕೆಯ ಸಂಚಾಲಕ ಅಬ್ದುಲ್ ಅಝೀಝ್ ಹಕ್ ಸ್ವಾಗತಿಸಿದರು, ಅಯ್ಯೂಬ್ ಯು.ಪಿ ವಂದಿಸಿದರು, ಕೆ.ಎಮ್.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Mangalore-14081801 Mangalore-14081802 Mangalore-14081803 Mangalore-14081804

Comments

comments

Comments are closed.

Read previous post:
ಸಾರ್ವತ್ರಿಕ ಕಾರ್ಯಕ್ಕೆ ನಾಗರಿಕರ ಸಹಕಾರ

ಕಿನ್ನಿಗೋಳಿ: ಸಾರ್ವತ್ರಿಕವಾಗಿ ನಡೆಸುವ ಸಮಾಜ ಸೇವಾ ಕಾರ್ಯಕ್ಕೆ ನಾಗರಿಕರ ಸಹಕಾರ ಸಿಕ್ಕಲ್ಲಿ ಯಶಸ್ಸು ಸಾಧ್ಯ ಹಾಗಾದಾಗ ಸಂಘಟನಾ ಶಕ್ತಿಯು ಸಹ ಬಲಗೊಳ್ಳುತ್ತದೆ ಎಂದು ಹಳೆಯಂಗಡಿ ಪಡುಪಣಂಬೂರು ವ್ಯವಸಾಯ ಸಹಕಾರ...

Close