ಮೂಲ್ಕಿ: ಸ್ಚಚ್ಛ ಗೆಳತಿ ಕಾರ್ಯಕ್ರಮ

ಮೂಲ್ಕಿ: ದ.ಕ ಜಿಲ್ಲಾ ಪಂಚಾಯಿತಿ ಮಂಗಳೂರು, ಸ್ವಚ್ಛಭಾರತ್ ಮಿಷನ್ ಜಿಲ್ಲಾ ನೆರವು ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿಜಯಾ ಕಾಲೇಜು ಮೂಲ್ಕಿ ಇವರ ಸಹಯೋಗದಲ್ಲಿ ಸ್ವಚ್ಛ ಗೆಳತಿ ಕಾರ್ಯಕ್ರಮ ಮೂಲ್ಕಿ ಪರಿಸರದ ಶಾಲೆಗಳಲ್ಲಿ ಜರುಗಿತು. ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆ, ಸಿ.ಎಸ್.ಐ ಕಾರ್ನಾಡು, ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪು, ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು, ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕರ್ನಿರೆ, ದ.ಕ. ಜಿ.ಪಹಿರಿಯವ ಪ್ರಾಥಮಿಕ ಶಾಲೆ ಕೆ.ಎಸ್.ರಾವ್ ನಗರ, ಭಾರತ್ ಮಾತಾ ಹಿರಿಯ ಪ್ರಾಥಮಿಕ ಶಾಲೆ ಪುನರೂರು ಮತ್ತು ಯು.ಬಿ.ಎಂ.ಸಿ. ಕಾರ್ನಾಡು ಮುಂತಾದ ಶಾಲೆಗಳಲ್ಲಿ ಸ್ಚಚ್ಛ ಗೆಳತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸ್ವಚ್ಚಗೆಳತಿ ಕಾರ್ಯಕ್ರಮ: ದ.ಕ ಜಿಲ್ಲಾ ಪಂಚಾಯಿತಿ ಮಂಗಳೂರು, ಸ್ವಚ್ಛಭಾರತ್ ಮಿಷನ್ ಜಿಲ್ಲಾ ನೆರವು ಘಟಕ ದಿಂದ ತರಬೇತಿಹೊಂದಿದ ರಾಷ್ಟ್ರೀಯ ಸೇವಾ ಯೋಜನೆಯ ಕಾಲೇಜು ವಿದ್ಯಾರ್ಥಿನಿಯರು ವಿವಿಧ ಶಾಲೆಗಳ 5ನೇ, 6ನೇ, 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ಋತುಸ್ರಾವ ಜಾಗೃತಿ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಪ್ರೌಢವಸ್ಥೆ ಎನ್ನುವುದು ಬಾಲ್ಯದ ಬಾಲಿಕ ಸ್ಥಿತಿಯಿಂದ ಹದಿಹರೆಯದ ಪ್ರೌಢಿಮೆಗೆ ಕಾಲಿಡುವ ವಿಶಿಷ್ಟವಾದ ಹಂತ ಇದು ಸಂತಾನೋತ್ಪತಿಯ ಹೆಬ್ಬಾಗಿಲು ಈಬಗ್ಗೆ ತಿಳುವಳಿಕೆ ಎಚ್ಚರ ಹಾಗೂ ಶುಚಿತ್ವದ ಉಪಯೋಗಗಳ ಬಗ್ಗೆ ಸ್ತೂಲ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದರು. ವಿಜಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ವೆಂಕಟೇಶ ಭಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಾದ ಶಿಲ್ಪಾ, ಸ್ನೇಹ, ವಿನಿತ, ದೀಕ್ಷಿತ, ರಕ್ಷಾ, ನವ್ಯ, ಕವಿತ, ಅನನ್ಯ, ತೃಪ್ತಿ, ಶ್ರೀಲತ, ದೀಕ್ಷಿತ, ತುಷಾರ ಮತ್ತು ಜಯಶ್ರೀ, ಸ್ಚಚ್ಛ ಗೆಳತಿ ತಂಡ ತಂಡಗಳಾಗಿ ವಿವಿಧ ಶಾಲೆಗಳಿಗೆ ತೆರಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Mulki--08151806

Comments

comments

Comments are closed.

Read previous post:
Mulki--08151805
ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಕಾರ್ಯಕ್ರಮ

ಮೂಲ್ಕಿ: ಪಠ್ಯ ಶಿಕ್ಷಣದೊಂದಿಗೆ ಪ್ರಾಪಂಚಿಕ ಜ್ಞಾನ ಸಂಪನ್ನತೆ ಹಾಗೂ ಸಾಮಾಜದೊಂದಿಗೆ ಹೊಂದಿಕೊಳ್ಳುವಿಕೆಯ ಬದುಕು ನಮಗೆ ಉತ್ತಮ ಭವಿಷ್ಯದ ಅವಕಾಶ ಲಭಿಸುವಂತೆ ಮಾಡುತ್ತದೆ ಎಂದು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು...

Close