ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಕಾರ್ಯಕ್ರಮ

ಮೂಲ್ಕಿ: ಪಠ್ಯ ಶಿಕ್ಷಣದೊಂದಿಗೆ ಪ್ರಾಪಂಚಿಕ ಜ್ಞಾನ ಸಂಪನ್ನತೆ ಹಾಗೂ ಸಾಮಾಜದೊಂದಿಗೆ ಹೊಂದಿಕೊಳ್ಳುವಿಕೆಯ ಬದುಕು ನಮಗೆ ಉತ್ತಮ ಭವಿಷ್ಯದ ಅವಕಾಶ ಲಭಿಸುವಂತೆ ಮಾಡುತ್ತದೆ ಎಂದು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಪೈ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧುನಿಕ ಜಗತ್ತಿನಲ್ಲಿ ವಿಫುಲವಾದ ಅವಕಾಶಗಳಿದ್ದಂತೆ ಸ್ಪರ್ದೆಯೂ ಅಧಿಕವಿದೆ ಸಂಪೂರ್ಣ ಜ್ಞಾನ ಸಂಪನ್ನ ವ್ಯಕ್ತಿಮಾತ್ರ ಅಭಿವೃದ್ಧಿ ಹೊಂದಲು ಅವಕಾಶ ಲಭಿಸುತ್ತದೆ. ಪಠ್ಯೇತರ ಜ್ಞಾನ ಸಂಪನ್ನತೆಗೆ ರಾಷ್ಟ್ರೀಯ ಸೇವಾ ಯೋಜನೆ ಬಹಳ ಪೂರಕವಾಗಿದೆ ಎಂದರು.
ಪ್ರಗತಿಪರ ಕೃಷಿಕರು ಹಾಗೂ ಕರ್ನಿರೆ ಶ್ರೀ ಧರ್ಮ ಜಾರಾಂದಾಯ ದೈವಸ್ಥಾನದ ಅಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣ ಮುಗಿಸಿ ವ್ಯವಾಹಾರ ಜಗತ್ತಿಗೆ ಕಾಲಿರಿಸುವ ಸಂದರ್ಭ ವಿದ್ಯಾರ್ಥಿಗಳಿಗೆ ಅಗತ್ಯವಿರುವುದು ಸಮಾಜದ ಒಡನಾಟ ಹಾಗೂ ಸ್ವಾವಲಂಭಿ ಬದುಕು. ಜನರೊಂದಿಗೆ ಬೆರೆತು ಬದುಕುವ ಕಲೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸುತ್ತದೆ ಮಾತ್ರವಲ್ಲಿ ನಾಯಕತ್ವ ಗುಣ ಸಂಪನ್ನರಾಗಿಸುವ ಮೂಲಕ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ಅಭಿವೃದ್ಧಿಗೊಳಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ವಹಿಸಿದ್ದರು. ಅತಿಥಿಗಳಾಗಿ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ವಿಜಯ ಕುಮಾರಿ, ಯೋಜನಾಧಿಕಾರಿ ಪ್ರೊ. ವೆಂಕಟೇಶ ಭಟ್, ಸೌಮ್ಯಶ್ರೀ, ವಿದ್ಯಾರ್ಥಿ ನಾಯಕ ತಿವಿಕ್ರಮ ಭಾಗವತ್,ಕಾರ್ಯದರ್ಶಿಗಳಾದ ಸ್ನೇಹಾ ಶೆಣೈ, ಶಶಾಂಕ್ ಪುನರೂರು ಉಪಸ್ಥಿತರಿದ್ದರು. ಸ್ನೇಹಾ ಶೆಣೈ ಸ್ವಾಗತಿಸಿದರು. ರಚನಾ ಮತ್ತು ಅನೂಷಾ ದಿವಾಣ ಅತಿಥಿಗಳನ್ನು ಪರಿಚಯಿಸಿದರು. ಸೌಪರ್ಣಿಕಾ ಮತ್ತು ತುಷಾರ ನಿರೂಪಿಸಿದರು. ಶಶಾಂಕ್ ಪುನರೂರು ವಂದಿಸಿದರು.

Mulki--08151805

Comments

comments

Comments are closed.

Read previous post:
Kinnigoli-08151802
ನಾಗರಪಂಚಮಿ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಕೊಳಚಿಕಂಬಳ ಮುಲ್ಕಿ  

Close