ತೋಕೂರು ಸ್ಪೋರ್ಟ್ಸ್ ಕ್ಲಬ್ ಕಾರ್ಯ ಶ್ಲಾಘನೀಯ 

ಮೂಲ್ಕಿ: ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ, ಕ್ರೀಡೆಯಿಂದ ಹುಟ್ಟಿಕೊಂಡ ಸಂಸ್ಥೆ ಇಂದು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವುದು ಶ್ಲಾಘನೀಯ, ತೋಕೂರು ಸ್ಪೋಟ್ಸ್ ಕ್ಲಬ್‌ನ ಕಾರ್ಯ ಚಟುವಟಿಕೆಯು ಮಾದರಿಯಾಗಿದೆ ಎಂದು ಮೂಲ್ಕಿ ರೈಲ್ವೇ ನಿಲ್ದಾಣದ ಸ್ಟೇಶನ್ ಮಾಸ್ಟರ್ ಗಣೇಶ್ ಆಚಾರ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಮಂಗಳೂರಿನ ನೆಹರು ಯುವ ಕೇಂದ್ರದ ಮಾರ್ಗದರ್ಶನದಲ್ಲಿ ನಡೆದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸ್ವಚ್ಚ ಭಾರತ ಬೇಸಿಗೆ ಶಿಬಿರದ ಅಭಿಯಾನದಲ್ಲಿ ಮೂಲ್ಕಿ ರೈಲ್ವೇ ನಿಲ್ದಾಣದಲ್ಲಿ ಕೈಗೊಂಡ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಕೋರಿದರು.
ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಮಾತನಾಡಿ, ನಮ್ಮ ಪರಿಸರದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಚತೆಯನ್ನು ಹಮ್ಮಿಕೊಂಡಿರುವ ಸಂಸ್ಥೆಯನ್ನು ಜನರು ಪ್ರೋತ್ಸಾಹಿಸಿ ಗೌರವಿಸುತ್ತಿದ್ದಾರೆ ಇದು ಇತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಿದೆ ಎಂದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಶುಭ ಹಾರೈಸಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯ ಸಂತೋಷ್‌ಕುಮಾರ್, ಕುಸುಮಾ ಚಂದ್ರಶೇಖರ್, ಮೂಲ್ಕಿ ರೈಲ್ವೇ ನಿಲ್ದಾಣದ ಹಿರಿಯ ಸ್ಟೇಶನ್ ಮಾಸ್ಟರ್ ಕೆ.ಕುಲಶೇಖರ್, ಸುಧೀರ್ ಪೈ, ಸ್ಟೀವನ್ ಡಿಸೋಜಾ, ದಿವಾಕರ್ ಶೆಟ್ಟಿ, ಸವಿತಾ ಕೋಟ್ಯಾನ್, ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್, ಕೋಶಾಧಿಕಾರಿ ದೀಪಕ್ ಸುವರ್ಣ, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಜಗದೀಶ್ ಕುಲಾಲ್, ಗಣೇಶ್ ದೇವಾಡಿಗ, ಗೌತಮ್ ಬೆಳ್ಚಡ, ವೀಕ್ಷಿತ್ ದೇವಾಡಿಗ, ಪ್ರಸಾದ್ ಆಚಾರ್ಯ, ಯೋಗೀಶ್ ಕೋಟ್ಯಾನ್, ಜಗದೀಶ್ ಬೆಳ್ಚಡ, ಕಾರ್ತಿಕ್ ಪೂಜಾರಿ, ಮಹೇಶ್ ಬೆಳ್ಚಡ, ಗಣೇಶ್ ಪೂಜಾರಿ ಬೆಂಗಳೂರು, ಸಂಪತ್ ದೇವಾಡಿಗ, ಗಣೇಶ್ ಆಚಾರ್ಯ, ಅರ‍್ಫಾಝ್, ಪ್ರಮೋದ್ ಪೂಜಾರಿ, ಜಯಂತ್ ಕುಂದರ್, ಸುಭಾಸ್ ಅಮೀನ್ ಲೋಹಿತ್ ದೇವಾಡಿಗ, ಸುರೇಶ್ ಶೆಟ್ಟಿ, ಗೌರೀಶ್ ಬೆಳ್ಚಡ, ಕಿರಣ್ ಬೆಳ್ಚಡ, ಶಶಿಧರ ಆಚಾರ್ಯ, ಶಂಕರ ಪೂಜಾರಿ, ನಾರಾಯಣ ಜಿ.ಕೆ., ವಿಜಯಲಕ್ಷ್ಮೀ, ಅಶ್ವಥ್, ನಿಖಿಲ್ ಬೆಳ್ಚಡ, ವಿಶಾಲ್ ಕಿರೋಡಿಯನ್, ಸುಖಾನಂದ ಶೆಟ್ಟಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.
ಸ್ವಚ್ಚತಾ ಕಾರ್ಯದಲ್ಲಿ ಪ್ರತೀ ಫ್ಲಾಟ್‌ಫಾರ್ಮ್‌ನಲ್ಲಿ ಬೆಳೆದಿದ್ದ ಕಳೆಗಳನ್ನು ತೆರವು ನಡೆಸಿ, ರೈಲ್ವೇ ನಿಲ್ದಾಣದ ಹಿರಭಾಗದಲ್ಲಿಯೂ ಸ್ವಚ್ಚತಾ ಕಾರ್ಯ ಹಾಗೂ ನಿಲ್ದಾಣದ ಸುತ್ತಮುತ್ತ ಇದ್ದ ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ತೆರವುಗೊಳಿಸಲಾಯಿತು.

Mulki--08151807

Comments

comments

Comments are closed.

Read previous post:
Mulki--08151806
ಮೂಲ್ಕಿ: ಸ್ಚಚ್ಛ ಗೆಳತಿ ಕಾರ್ಯಕ್ರಮ

ಮೂಲ್ಕಿ: ದ.ಕ ಜಿಲ್ಲಾ ಪಂಚಾಯಿತಿ ಮಂಗಳೂರು, ಸ್ವಚ್ಛಭಾರತ್ ಮಿಷನ್ ಜಿಲ್ಲಾ ನೆರವು ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿಜಯಾ ಕಾಲೇಜು ಮೂಲ್ಕಿ ಇವರ ಸಹಯೋಗದಲ್ಲಿ ಸ್ವಚ್ಛ ಗೆಳತಿ...

Close