ಕಿನ್ನಿಗೋಳಿ: ಆಗಸ್ಟ್ 22 ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು, ರೋಟರಿ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸೇವಾ ಸಂಘ (ರಿ.) ಕಿನ್ನಿಗೋಳಿ, ಯಕ್ಷಲಹರಿ (ರಿ.)ಕಿನ್ನಿಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಯು ಆಗಸ್ಟ್ 22ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12-30ರತನಕ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವುದು. ಸ್ಪರ್ಧೆಯು ಮೂರು ವಿಭಾಗದಲ್ಲಿ ಜರಗಲಿರುವುದು. ಎರಡು ವರ್ಷದೊಳಗಿನ ಮಕ್ಕಳು, ಎರಡು ವರ್ಷದಿಂದ ನಾಲ್ಕು ವರ್ಷದೊಳಗಿನ ಮಕ್ಕಳು, ನಾಲ್ಕು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳು ಹಾಗೂ ನಾಲ್ಕು ವರ್ಷದಿಂದ ಆರು ವರ್ಷದ ಮಕ್ಕಳಿಗೆ ರಾಧಾಕೃಷ್ಣ ಸ್ಪರ್ಧೆಯು ನಡೆಯಲಿದೆ. ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಗೂ ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪತ್ರವಿದೆ. ನೋಂದಣಿ ಸಂದರ್ಭ ಜನನ ಪ್ರಮಾಣ ಪತ್ರವನ್ನು ಹಾಜರಿಪಡಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.: 8296372580, 9481960238, 08242295423.

Comments

comments

Comments are closed.

Read previous post:
Flag
ಕಿನ್ನಿಗೋಳಿ : ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ

ಕಿನ್ನಿಗೋಳಿ : ಪುನರೂರು ಭಾರತಮಾತ ಶಾಲೆ ಪುನರೂರು ಭಾರತಮಾತ ಹಿರಿಯ ಪ್ರಾಥಮಿಕ ಶಾಲೆ , ಪ್ರೌಢ ಶಾಲೆ , ಅಂಗನವಾಡಿಯಲ್ಲಿ ಡಾ. ಶಮೀಮ ಹಾಗೂ ಡಾ. ನಹೀಮ ಧ್ವಜಾರೋಹಣಗೈದರು....

Close