ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ತಿಳಿ ಹೇಳಬೇಕು

ಕಿನ್ನಿಗೋಳಿ : ಕಷ್ಟದ ದಿನಗಳಾಗಿದ್ದ ಆಟಿ ತಿಂಗಳ ಸಂದರ್ಭ ಪ್ರಕೃತಿಯಲ್ಲಿ ಸಿಗುವ ಸೊಪ್ಪುಗಳೇ ಆಹಾರವಾಗಿದ್ದು ಆರೋಗ್ಯಕ್ಕೆ ಉತ್ತಮವಾಗಿತ್ತು. ಆಟಿ ಆಚರಣೆ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ತಿಳಿ ಹೇಳಬೇಕು ಎಂದು ಎಂ.ಆರ್.ಪಿ.ಎಲ್ ನ ಮ್ಯಾನೇಜರ್ ವೀಣಾ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ರೋಟರಿ ಭವನದಲ್ಲಿ ಇನ್ನರ್‌ವೀಲ್ ಹಾಗೂ ರೋಟರಿ ವತಿಯಿಂದ ನಡೆದ ಆಟಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ನಾಟಿ ವೈದ್ಯ ಮಹಾಬಲ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಕೆ.ಬಿ. ಸುರೇಶ್, ಇನ್ನರ್ ವೀಲ್ ಕಾರ್ಯದರ್ಶಿ ಮಲ್ಲಿಕಾ ಪೂಂಜ, ರೋಟರಿ ಕ್ಲಬ್ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ದಿವ್ಯ ಶೆಟ್ಟಿ ಮತ್ತಿತರರು ಇದ್ದರು.
ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಸುಧಾ ಉಡುಪ ಸನ್ಮಾನ ಪತ್ರ ವಾಚಿಸಿದರು. ರೇಣುಕಾ ಶೆಟ್ಟಿ ವಂದಿಸಿದರು. ಶಾಲೆಟ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Kinnigoli-18081801

Comments

comments

Comments are closed.

Read previous post:
ಅತ್ತೂರು : ದುರ್ಗಾನಮಸ್ಕಾರ ಪೂಜೆ

ಕಿನ್ನಿಗೋಳಿ : ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಖಿಲಾಂಡೇಶ್ವರೀ ಸನ್ನಿಧಿಯಲ್ಲಿ ಆಗಸ್ಟ್ 17 ರಿಂದ ಶ್ರಾವಣ ಮಾಸದ ಪ್ರತೀ ಶುಕ್ರವಾರ ರಾತ್ರಿ 7 ರಿಂದ ದುರ್ಗಾನಮಸ್ಕಾರ ಪೂಜೆ, ಭಜನೆ ಮತ್ತಿತರ...

Close