ಪ್ರತಿಭಾ ಪುರಸ್ಕಾರ , ಪ್ರಶಸ್ತಿ ಫಲಕ ವಿತರಣೆ

ಕಿನ್ನಿಗೋಳಿ : ಮಾನವೀಯ ಮೌಲ್ಯಯುಳ್ಳ ಸಮಾಜ ಮುಖಿ ಸೇವಾ ಕಾರ್ಯ ಹಾಗೂ ಶಿಕ್ಷಣ ಪೂರಕ ಕಾರ್ಯಕ್ರಮಗಳನ್ನು ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ಸೇವಾ ಸಂಸ್ಥೆಗಳು ತೊಡಗಿಸಿಕೊಳ್ಳಬೇಕು ಎಂದು ಪೊಂಪೈ ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ ಜಗದೀಶ ಹೊಳ್ಳ ಹೇಳಿದರು.
ಕಿನ್ನಿಗೋಳಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಆಶ್ರಯದಲ್ಲಿ ಯುಗಪುರುಷ ಸಭಾಭವನದಲ್ಲಿ ನಡೆದ ಸ್ವಾತ್ರಂತ್ಸೋವ ಹಾಗೂ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಫಲಕ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಪರಿಸರದ ಎಸ್ ಎಸ್‌ಎಲ್‌ಸಿಯ ಅತೀ ಹೆಚ್ಚು ಅಂಕ ಪಡೆದ ವಿವಿಧ ಶಾಲೆ ವಿದ್ಯಾರ್ಥಿಗಳಾದ ತೇಜಸ್ವಿನಿ, ಪ್ರತೀಕ್ಷಾ ಎನ್ ಶೆಟ್ಟಿ, ದೀಕ್ಷಿತಾ ಶೆಟ್ಟಿ, ಜಿ. ಅಭೀಷೇಕ್, ಸ್ವಾತಿ ಶೆಟ್ಟಿ, ಅಂಕಿತಾ ಭಟ್, ಕೃಪಾ ಸುವರ್ಣ, ಹೆವಿನ್ ಉಜ್ವಲ್ ಸೌರಭ್, ಸೋಹನ್ ಸಿ ಪಾಟೀಲ್, ಮನು ಕಶ್ಯಪ್, ಚೈತ್ರಾಕ್ಷಿ , ವೃಂದಾ, ಅರುಣ್, ಮಿಶಲ್ ಮೆಂಡನ್, ಅನ್ನಪೂರ್ಣ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ನಿರಂತರ ಮೂರು ವರ್ಷಗಳಿಂದ ೧೦೦ ಶೇ. ಫಲಿತಾಂಶ ಪಡೆದ ನಡುಗೋಡು ಸರಕಾರಿ ಪ್ರೌಢಶಾಲೆ, ಮೋರಾರ್ಜಿ ಪ್ರೌಢ ಶಾಲೆ ಹಾಗೂ ಲಿಟ್ಲ್ ಫ್ಲವರ್ ಪ್ರೌಢ ಶಾಲೆಗೆ ಶಾಶ್ವತ ಫಲಕ ನೀಡಿ ಪುರಸ್ಕಾರ ನೀಡಲಾಯಿತು. ಮೇರಿವೇಲ್ ಪ್ರೌಢ ಶಾಲೆ, ರೋಟರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪೊಂಪೈ ಪದವಿ ಪೂರ್ವ ಶಾಲೆಗೆ ಪರ್ಯಾಯ ಫಲಕ ನೀಡಲಾಯಿತು.
ವೈ ಯೋಗೀಶ್ ರಾವ್ ಅವರ ವತಿಯಿಂದ ಏಳಿಂಜೆ ಲಿಟ್ಲ್ ಫ್ಲವರ್ ಶಾಲೆಯ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಇಗ್ನೇಷಿಯಸ್ ಮೆಂಡೋನ್ಸಾ ಪ್ರಾಯೋಜಕತ್ವದಲ್ಲಿ ಮೂರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ವಿದ್ಯಾರ್ಥಿ ವೇತನ ನೀಡಲಾಯಿತು.

ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ. ಫಾ. ಮಾಥ್ಯೂ ವಾಸ್, ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಲಯನ್ಸ್ ಪ್ರಾಂತಿಯ ರಾಯಬಾರಿ ಮೆಲ್ವಿನ್ ಡಿಸೋಜ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ. ಯೋಗೀಶ್ ರಾವ್, ಲಯನೆಸ್ ಅಧ್ಯಕ್ಷೆ ಹಿಲ್ದಾ ಡಿಸೋಜ, ಕಾರ್ಯದರ್ಶಿಗಳಾದ ರೇಶ್ಮಾ ಮಿನೇಜಸ್, ಸುರೇಖಾ ನಾಗೇಶ್, ನಿಟಕಪೂರ್ವ ಅಧ್ಯಕ್ಷೆ ಶಾಂಭವಿ ಶೆಟ್ಟಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್ ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿ, ಜೋಸೆಫ್ ಕ್ವಾಡ್ರಸ್, ಬರ್ಟನ್ ಸಿಕ್ವೇರಾ ಪರಿಚಯಿಸಿದರು. ವಲೇರಿಯನ್ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು. ಹಿಲ್ಡಾ ಡಿಸೋಜ ವಂದಿಸಿದರು.

Kinnigoli-18081802

Comments

comments

Comments are closed.

Read previous post:
Kinnigoli-18081801
ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ತಿಳಿ ಹೇಳಬೇಕು

ಕಿನ್ನಿಗೋಳಿ : ಕಷ್ಟದ ದಿನಗಳಾಗಿದ್ದ ಆಟಿ ತಿಂಗಳ ಸಂದರ್ಭ ಪ್ರಕೃತಿಯಲ್ಲಿ ಸಿಗುವ ಸೊಪ್ಪುಗಳೇ ಆಹಾರವಾಗಿದ್ದು ಆರೋಗ್ಯಕ್ಕೆ ಉತ್ತಮವಾಗಿತ್ತು. ಆಟಿ ಆಚರಣೆ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ತಿಳಿ ಹೇಳಬೇಕು...

Close