ಗುರುಕುಲ ಪದ್ಧತಿಯಲ್ಲಿ ತುಳು ಸಂಸ್ಕೃತಿ

ಕಿನ್ನಿಗೋಳಿ : ಗುರುಕುಲ ಪದ್ಧತಿಯಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಅಡಗಿದೆ. ನಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಲ್ಲಿ ನಾಡಿನ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯಶ್ರೀ ಹೇಳಿದರು.
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ತುಳು ಸಂಸೃತಿಯನ್ನು ಬಿಂಬಿಸುವ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು. ತುಳುನಾಡಿನ ವಿವಿಧ ಪರಿಕರಗಳನ್ನು ಪ್ರದರ್ಶಿಸಲಾಯಿತು. ಕಾಲೇಜಿನ ತುಳುಕೂಟದ ಸದಸ್ಯರು ಸಹಕರಿಸಿದ್ದರು. ತೀರ್ಪುಗಾರರಾಗಿ ರೇವತಿ ಶೆಡ್ತಿ ಮತ್ತು ಪ್ರತಿಮಾ ಭಾಗವಹಿಸಿದ್ದರು.
ಕಾರ್ಯಕ್ರಮ ಸಂಘಟಕ ಪ್ರೇಮನಾಥ ಶೆಟ್ಟಿಗಾರ್ ಮತ್ತು ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಮನಿಷ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08201801

 

Comments

comments

Comments are closed.

Read previous post:
Kinnigoli-18081802
ಪ್ರತಿಭಾ ಪುರಸ್ಕಾರ , ಪ್ರಶಸ್ತಿ ಫಲಕ ವಿತರಣೆ

ಕಿನ್ನಿಗೋಳಿ : ಮಾನವೀಯ ಮೌಲ್ಯಯುಳ್ಳ ಸಮಾಜ ಮುಖಿ ಸೇವಾ ಕಾರ್ಯ ಹಾಗೂ ಶಿಕ್ಷಣ ಪೂರಕ ಕಾರ್ಯಕ್ರಮಗಳನ್ನು ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ಸೇವಾ ಸಂಸ್ಥೆಗಳು ತೊಡಗಿಸಿಕೊಳ್ಳಬೇಕು ಎಂದು ಪೊಂಪೈ ಪದವಿ ಕಾಲೇಜು...

Close