ಕಟೀಲು : ಸದ್ಭಾವನಾ ದಿನಾಚರಣೆ

ಕಟೀಲು : ಇಂದಿನ ಯುವಕರು ಅಸಹನೆ, ಅಶಾಂತಿಯ ಗುಣದಿಂದ ದೂರವಾಗಿ ಸಹಬಾಳ್ವೆಯ ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು ಎಂದು ಕಟೀಲು ಕಾಲೇಜು ಉಪನ್ಯಾಸಕ ಪ್ರೊ. ಸುರೇಶ್ ಹೇಳಿದರು.
ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸದ್ಭಾವನಾ ದಿನಾಚರಣೆಯ ಸಂದರ್ಭ ಉಪನ್ಯಾಸ ನೀಡಿದರು.
ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಯೋಜನಾಧಿಕಾರಿಗಳಾದ ಡಾ. ಗಣಪತಿ ಭಟ್, ಪರಮೇಶ್ವರ ಸಿ. ಎಚ್, ಯೂತ್ ರೆಡ್ ಕ್ರಾಸಿನ ಅಧಿಕಾರಿ ಪ್ರೊ. ಅಶ್ವಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶ್ವೇತಾ ಸ್ವಾಗತಿಸಿದರು. ನಮೃತಾ ವಂದಿಸಿದರು. ಕಿರಣ್ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಮರೀನಾ ಕಾರ್ಯಕ್ರಮ ನಿರೂಪಿಸಿದರು.

Kinnigoli-08221810

Comments

comments

Comments are closed.

Read previous post:
Kinnigoli-08221809
ತೋಕೂರು ಐಟಿಐ: ಸೇತುಬಂಧ ಕಾರ್ಯಕ್ರಮ

ಕಿನ್ನಿಗೋಳಿ : ಯಶಸ್ಸು ಎನ್ನುವುದು ಬರೀ ಪದವಿಗಳನ್ನು ಗಳಿಸುವುದು ಮಾತ್ರ ಅಲ್ಲ. ನಮ್ಮಿಂದ ಕನಿಷ್ಠ ೫ ಐದು ಮಂದಿಗಾದರೂ ಜೀವನದ ದಾರಿ ತೋರಿಸುವಂತಾದರೆ ಅದೇ ನಮ್ಮ ಯಶಸ್ಸು, ನಿರ್ದಿಷ್ಟ...

Close